ಬೆಂಗಳೂರಿನ 76 ವರ್ಷದ ವೃದ್ಧ ಕೊರೊನಾಗೆ ಬಲಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾದಿಂದ ಸಾವು ಕಂಡವರ ಸಂಖ್ಯೆ ಇದೀಗ ೧೦ಕ್ಕೇರಿದೆ.
ಇಂದು ೭೬ ವರ್ಷದ ಬೆಂಗಳೂರು ನಿವಾಸಿ ಕೊರೊನಾದಿಂದ ಸಾವು ಕಂಡಿದ್ದು, ಸಂಜೆ ೫ ಗಂಟೆಯ ವರದಿಯಂತೆ ಕರ್ನಾಟಕದಲ್ಲಿ ಒಟ್ಟಾರೆಯಾಗಿ ಕೊರೊನಾ ಸೋಂಕಿತ ಪ್ರಕರಣಗಳು ೨೬೦ಕ್ಕೇರಿದೆ.
ಕಳೆದ ಮಾ.೧೨ರಂದು ೭೬ ವರ್ಷದ ವೃದ್ಧ(ಪೇಷಂಟ್ ನಂ.೨೧೯)ನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.ಈತ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಎಂದು ತಿಳಿದು ಬಂದಿದೆ. ಆದರೆ ಇಂದು ತೀವ್ರ ಉಸಿರಾಟದ ತೊಂದರೆಯಿAದ ಆ ೭೬ ವರ್ಷದ ವೃದ್ಧ ಸಾವು ಕಂಡಿದ್ದಾನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿಗಳು ತಿಳಿಸಿವೆ.
ಇನ್ನು ರಾಜ್ಯದಲ್ಲಿ ಇಂದು ಹೊಸದಾಗಿ ೧೩ ಸೋಂಕಿತ ಪ್ರಕರಣಗಳು ಖಚಿತವಾಗಿದ್ದು, ಇದುವರೆಗೂ ೭೧ ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment