ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮೈಸೂರಿಗೆ ಎರಡನೇ ಸ್ಥಾನ

ಮೈಸೂರು: ಜುಬಿಲಿಯಂಟ್ ಕಾರ್ಖಾನೆಯಿಂದ ಕೊರೊನಾ ಯಾವ ರೀತಿ ಹರಡಿದೆ ಎಂಬುವುದರ ಬಗ್ಗೆ ಸೂಕ್ಷ್ಮ ವಿಚಾರವಾಗಿದ್ದು, ಇದರ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ ಅಂತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರು ಜಿಲ್ಲಾಡಳಿತದಿಂದ ಏರ್ಪಡಿಸಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಪ್ರತಿಮೆಗೆ ಮಾರ್ಲಾಪಣೆ ಮಾಡಿ ನಂತರ ಮಾತನಾಡಿದ ಅವರು,ಜುಬಿಲಿಯಂಟ್ ಕಾರ್ಖಾನೆಗೆ ಆಡಿಟರ್ ಬಂದಿದ್ರು ಅಂತಾರೆ, ಕಂಟೈನರ್ ಬಂದಿದ್ದ ಈ ವಿಚಾರ ಐಡಿಂಟಿಫೀಕೇಷನ್ ಮಾಡಿಕೊಂಡು ವಿಚಾರಣೆ ನಡೆಯುತ್ತಿದೆ. ಕಂಟೈನರ್ ವರದಿ ಸೂಕ್ಷ್ಮ ವಿಚಾರ. ಎಲ್ಲಾ ತನಿಖೆಯು ಕೂಲಂಕಷವಾಗಿ ನಡೆಯುತ್ತಿದೆ ಅಂತ ಹೇಳಿದ್ದಾರೆ.
ಇನ್ನು ಬೆಂಗಳೂರು ಬಿಟ್ಟರೆ ಮೈಸೂರು ಕೊರೊನಾ ಸೋಂಕಿತರ ಎರಡನೇ ಸ್ಥಾನದಲ್ಲಿದೆ. ಇದರ ಬಗ್ಗೆ ನಿಗಾವಹಿಸಲು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಿದಂತೆ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಅಂತ ಸ್ಪಷ್ಟಪಡಿಸಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಮೈಸೂರು

Please follow and like us:

Related posts

Leave a Comment