ಆರೋಗ್ಯ / HEALTH

ಪಕ್ಕದ ರಾಜ್ಯದಲ್ಲಿ ಕೊರೊನಾ ಅಬ್ಬರ,ತುಮಕೂರಿನಲ್ಲಿ ಭೀತಿ..!

Published

on

ತುಮಕೂರು: ಕರ್ನಾಟಕದ ಗಡಿಯ ಭಾಗದ ಮಡಕಶಿರಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ತುಮಕೂರು ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ.
ಸದ್ಯ ಜಿಲ್ಲೆಯ ಶಿರಾ ತಾಲ್ಲೂಕಿಗೆ ಕೆಲವೇ ಕಿಮೀ ದೂರದಲ್ಲಿ ಇರುವ ಅಗಳಿ,ಅಮರ ಪುರ ಮತ್ತಿತರ ಕಡೆ ಮುನ್ನೆಚ್ಚರಿಕೆಯಾಗಿ ಎರಡು ರಾಜ್ಯದ ಸಂಪರ್ಕಿಸುವ ಗಡಿ ಭಾಗವನ್ನು ಬಂದ್ ಮಾಡಲಾಗಿದೆ.
ತಾಲೂಕಿನ ಚಿರತಹಳ್ಳಿ, ಹಾರೋಗೆರೆ,ಮದಲೂರು,ಹೂನ್ನಗೊಡನಹಳ್ಳಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಅಲ್ಲದೆ,ತಾಲೂಕಿಗೆ ವ್ಯಾಪಾರ ಮತ್ತು ಕೃಷಿ ಮತ್ತಿತರ ಸಾಮಾಜಿಕ ಸಂಪರ್ಕದ ವಿಚಾರದಲ್ಲಿ ನಗರ ಹಾಗೂ ತಾಲೂಕಿನ ಅಧಿಕ ಪಾಲು.ಹೀಗಾಗಿ ನೆರೆ ರಾಜ್ಯಗಳಿಗೆ ಹೋಗಿ ಬರುವವರಿಗೆ ನಿರ್ಬಂಧ ವಿಧಿಸಲಾಗಿದೆ.
ಆಂಧ್ರÀ್ರಪ್ರದೇಶದ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳಿಂದಾಗಿ ಭೀತಿ ಶುರುವಾಗಿದೆ.ನಿನ್ನೆ ಸಂಜೆ ೬ ಗಂಟೆಯಿAದ ಈವರೆಗೆ ಆಂಧ್ರಪ್ರದೇಶದಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದ್ದು,ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ಇನ್ನು ಅಲ್ಲಿ ಪಾಸಿಟಿವ್ ಪ್ರಕರಣಗಳು ಕಂಡುಬAದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ತುಮಕೂರು ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಆಂಧ್ರ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದು,ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಣ್ಣು ತೆಗೆದು ಬಂದ್ ಮಾಡಲಾಗಿದೆ..

ಶ್ರೀಮಂತ್ ಕುಮಾರ್ ಎಕ್ಸ್ಪ್ರೆಸ್ ಟಿವಿ ಶಿರಾ(ತುಮಕೂರು)

Click to comment

Trending

Exit mobile version