ಶಾಸಕರ ಎದುರೇ ಪುರಸಭೆ ಮುಖ್ಯಾಧಿಕಾರಿಗೆ ಗ್ರಾಮಸ್ಥರಿಂದ ತರಾಟೆ

ಬೆಂಗಳೂರು: ಒಂದು ಕಡೆ ಕೋವಿಡ್-೧೯ ವೈರಸ್ ಬೀತಿಯಾದರೆ ಮತ್ತೊಂದು ಕಡೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.
ಹೌದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕಸಬಾ ಲಿಂಗಸೂಗೂರು ಗ್ರಾಮದಲ್ಲಿ ಕಳೆದ ೨೪ ದಿನಗಳಿಂದ ಕುಡಿಯುವ ನೀರು ಸಿಗದೇ ಜನರು ರೋಸಿ ಹೋಗಿದ್ದಾರೆ.
ಸದ್ಯ ಗ್ರಾಮದ ೧೯ನೇ ವಾರ್ಡಿನಲ್ಲಿ ೨೪ ದಿನಗಳಿಂದ ನೀರು ಸರಬರಾಜು ಆಗುತ್ತಿಲ್ಲ.ಅಲ್ದೆ..ಪಟ್ಟಣದಿಂದ ಕಸಬಾ ಲಿಂಗಸೂಗೂರು ಗ್ರಾಮಕ್ಕೆ ಟ್ಯಾಂಕ್ ಮೂಲಕ ಕುಡಿಯುವ ನೀರು ಸರಬರಾಜು ಆಗುತ್ತದೆ.ಆದರೆ ಮೋಟರ್ ರಿಪೇರಿ ನೆಪದಲ್ಲಿ ಪುರಸಭೆ ಅಧಿಕಾರಿಗಳು ನೀರು ಬಿಡುತ್ತಿಲ್ಲ.ಕುಡಿಯುವ ನೀರಿನ ಸಮಸ್ಯೆ ಕುರಿತು ಪುರಸಭೆಗೆ ಮನವಿ ಮಾಡಿದರೂ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಶಾಸಕರ ಎದುರಿಗೆ ಪುರಸಭೆ ಮುಖ್ಯಾಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಶಾಸಕ ಡಿ.ಎಸ್.ಹೂಲಗೇರಿ ಮಧ್ಯ ಪ್ರವೇಶಿಸಿ ಎರಡು ಮೂರು ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Please follow and like us:

Related posts

Leave a Comment