ಡಿಕೆಶಿಯವ್ರೇ ಈಗ ರಾಜಕೀಯ ಮಾಡೋ ಟೈಂ ಅಲ್ಲ..

ಚಿತ್ರದುರ್ಗ: ಈಗ ಯಾರೂ ರಾಜಕೀಯ ಮಾಡುವ ಸಮಯವಲ್ಲ. ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡಿ.ಕೆ.ಶಿವಕುಮಾರ್ ಮಾಡುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಡಿಕೆಶಿ ಇಂತಹ ಸಮಯದಲ್ಲಿ ರಾಜಕೀಯ ಮಾಡೋದು ದುರ್ದೈವದ ಸಂಗತಿ.ಈಗ ನಮ್ಮದೇನಿದ್ದರೂ ಕೊರೊನಾ ವಿರುದ್ಧ ಹೋರಾಟ. ಕರ್ನಾಟಕ ಸರ್ಕಾರ ಬೇರೆ ರಾಜ್ಯಗಳಿಗಿಂತ ಅತ್ಯಂತ ಸಮರ್ಥವಾಗಿ ಮಹಾಮಾರಿ ಸೋಂಕನ್ನು ನಿಯಂತ್ರಿಸುತ್ತಿದೆ.ಹೀಗಾಗಿ ಪ್ರತಿಪಕ್ಷದವರಿಗೆ ಮಾಡಲು ಬೇರೆ ಕೆಲಸಗಳು ಇಲ್ಲದ್ದಕ್ಕೆ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.
ಕೇಂದ್ರ, ರಾಜ್ಯ ಸರ್ಕಾರಗಳಿಂದ ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಜನರಿಗೆ ಉಚಿತ ಹಾಲು ವಿತರಣೆ ಮಾಡಿ, ರೈತರಿಗೆ ಮುಕ್ತ ಮಾರುಕಟ್ಟೆ ರೂಪಿಸಲಾಗಿದೆ. ಕೃಷಿ ಚಟುವಟಿಕೆ ಯಾವುದೇ ನಿರ್ಬಂಧವಿಲ್ಲದೆ ನಿರಾತಂಕವಾಗಿ ನಡೆದಿದೆ ಎಂದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಚಿತ್ರದುರ್ಗ

Please follow and like us:

Related posts

Leave a Comment