ಕಲಬುರಗಿ ಜಿಲ್ಲೆಯಲ್ಲಿ ಪಡಿತರ ಸಿಗದೇ ಕಂಗಲಾಗಿವೆ ಬಡಕುಟುಂಬಗಳು

ಕಲಬುರಗಿ: ರಾಜ್ಯದಲ್ಲಿ ಲಾಕ್‌ಡೌನ್‌ನಿಂದ ಆಹಾರ ಪದಾರ್ಥಗಳಿಲ್ಲದೇ ಬಡ ಕುಟುಂಬಗಳು ನಲುಗಿ ಹೋಗುತ್ತಿರುವ ಸಮಯದಲ್ಲೇ ಕಲಬುರಗಿ ಜಿಲ್ಲೆಯಲ್ಲಿ ಇದೇ ಕುಟುಂಬಗಳಿಗೆ ಪಡಿತರ ಧಾನ್ಯವನ್ನು ನೀಡದೆ ಸತಾಯಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಅAದ ಹಾಗೇ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಇದುವರೆಗೂ ಪಡಿತರ ಧಾನ್ಯ ನೀಡಿಲ್ಲ.ನಿರ್ಬಂಧಕ್ಕೊಳಪಟ್ಟ ಬಡಾವಣೆಗಳ ಬಡ ಕುಟುಂಬಗಳು ಸಂಕಷ್ಟಕ್ಕೆ ಗುರಿಯಾಗಿವೆ.
ಇನ್ನು ಪ್ರತಿಯೊಬ್ಬರಿಂದ ಥಂಬ್ ಪಡೆಯುವ ವೇಳೆ ಹಣ ಕೂಡ ವಸೂಲಿ ಮಾಡಲಾಗಿದೆ.ಆದ್ರೆ ಪಡಿತರ ಧಾನ್ಯ ಪೂರೈಸದೆ ಸತಾಯಿಸಲಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.
ಈ ಕೂಡಲೇ ಶಾಸಕ ಪ್ರಿಯಾಂಕ್ ಖರ್ಗೆ ಈ ಕುರಿತು ಮುತುವರ್ಜಿ ವಹಿಸಿ ಪಡಿತರ ಕೊಡಿಸಲು ನೆರವಾಗಬೇಕೆಂದು ಒತ್ತಾಯಿಸಿರುವ ಜನರು ನ್ಯಾಯಬೆಲೆ ಅಂಗಡಿಯ ಮಾಲೀಕನ ವರ್ತನೆಯಿಂದಾಗಿ ಲಾಕ್‌ಡೌನ್ ಪ್ರದೇಶದ ಬಡವರು ಕಂಗಾಲಾಗುವAತಾಗಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಕಲಬುರಗಿ

Please follow and like us:

Related posts

Leave a Comment