ವಿಜಯಪುರದಲ್ಲಿ ಒಂದೇ ದಿನಕ್ಕೆ 7 ಮಂದಿಗೆ ಸೋಂಕು

ವಿಜಯಪುರ:ಗೊಮ್ಮಟ ನಗರಿ ವಿಜಯಪುರದಲ್ಲಿ ಕೊರೊನಾ ಅಟ್ಟಹಾಸ ಮುಂದುರೆದಿದ್ದು,ಸದ್ಯಕ್ಕೆ ಇದು ಹಾಟ್‌ಸ್ಪಾಟ್ ಜಿಲ್ಲೆಯಾಗಿ ಮಾರ್ಪಟ್ಟಿದೆ.
ಅಂದ ಹಾಗೇ ಈಗಾಗಲೇ ಜಿಲ್ಲೆಯ ಜನರು ಕೊರೊನಾ ಭೀತಿಯಲ್ಲಿ ತತ್ತರಿಸಿ ಹೋಗಿದ್ದು, ಇಂದು ಒಂದೇ ದಿನಕ್ಕೆ ೭ ಪಾಸಿಟಿವ್ ಪ್ರಕರಣಗಳು ದಾಖಲಾಗಿ ಅದೇ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಇನ್ನು ನಿನ್ನೆವರೆಗೆ ೧೦ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ೧೭ ಪಾಸಿಟಿವ್ ಕೊರೊನಾ ದೃಢವಾಗಿವೆ.ಅಲ್ಲದೆ, ಇಂದು ೭ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ರೋಗಿ ನಂ ೨೨೧ರ ಮಹಿಳೆಯಿಂದ ೧೨ವರ್ಷದ ಬಾಲಕ (೩೦೫), ೬೫ ವರ್ಷದ ಪುರುಷ (೩೦೬), ೬೬ ವರ್ಷದ ಪುರುಷ (೩೦೭), ೩೭ವರ್ಷದ ಪುರುಷ (೩೦೮), ೭೦ವರ್ಷದ ಮಹಿಳೆ(೩೦೯), ೫೫ವರ್ಷದ ಮಹಿಳೆ (೩೧೩)ಗೆ ಸೋಂಕು ಹರಡಿದ್ದು, ಎಲ್ಲರೂ ಚಪ್ಪರಬಂದ್ ಬಡಾವಣೆ ನಿವಾಸಿಗಳಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ೧.೫ವರ್ಷದ ಬಾಲಕಿಗೆ ಸೋಂಕು ತಗಲಿದ್ದು,ಈಕೆ ರೋಗಿ-೨೨೮ ಮತ್ತು ೨೩೨ ಕುಟುಂಬ ಸದಸ್ಯಯಾಗಿದ್ದಾಳೆ ಎಂದು ತಿಳಿದುಬಂದಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ವಿಜಯಪುರ

Please follow and like us:

Related posts

Leave a Comment