ಗಣಿ ನಾಡಿನಲ್ಲಿ ಹೆಚ್ಚಾದ ನಕಲಿ ವೈದ್ಯರ ಹಾವಳಿ

ಬಳ್ಳಾರಿ: ಕೊರೊನಾ ಆರ್ಭಟಿಸುತ್ತಿರುವ ಈ ಸಂದರ್ಭದಲ್ಲಿ ಗಣಿನಾಡು ಬಳ್ಳಾರಿಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ.
ಸದ್ಯ ಇಂದು ಬಳ್ಳಾರಿ ತಾಲೂಕಿನ ಮುಂಡರಗಿಯಲ್ಲಿ ತಹಶೀಲ್ದಾರ್ ನಾಗರಾಜ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಅಬ್ದುಲ್ಲಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಓರ್ವ ನಕಲಿ ವೈದ್ಯನನ್ನು ಪತ್ತೆ ಹಚ್ಚಿ ಆತ ನಡೆಸುತ್ತಿದ್ದ ಕ್ಲಿನಿಕ್ ಸೀಜ್ ಮಾಡಿದೆ.
ಅಂದ ಹಾಗೇ ಸೋಮಶೇಖರ್ ಎಂಬಾತನೇ ನಕಲಿ ವೈದ್ಯನಾಗಿದ್ದು,ಈತ ಮುಂಡರಗಿಯಲ್ಲಿ ಆರ್.ಎಂ.ಪಿ ಡಾಕ್ಟರ್ ನಕಲಿ ಪ್ರಮಾಣಪತ್ರ ಹಾಗೂ ನಕಲಿ ಐಡಿ ಕಾರ್ಡ್ ಇಟ್ಟುಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.
ಇನ್ನು ನಕಲಿ ವೈದ್ಯ ಸೋಮಶೇಖರ್ ಅವರನ್ನು ಬಳ್ಳಾರಿ ಗ್ರಾಮೀಣ ಪೊಲೀಸರ ವಶಕ್ಕೆ ನೀಡಲಾಗಿದ್ದು,ಪ್ರಕರಣ ದಾಖಲಿಸುವಂತೆ ತಹಶೀಲ್ದಾರ್ ನಾಗರಾಜ ಪೊಲೀಸರಿಗೆ ಆದೇಶಿಸಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್,ದಾಳಿ ವೇಳೆ ಕರ್ನಾಟಕ ಮೆಡಿಕಲ್ ಅಸೋಸಿಯೇಶನ್ ಸಂಬAಧಿಸಿದ ಯಾವುದೇ ಪ್ರಮಾಣಪತ್ರ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ದೊರೆತಿಲ್ಲ.ಜೊತೆಗೆ ಜನರಿಗೆ ಈ ನಕಲಿ ವೈದ್ಯ ಸ್ಟೀರಾಯ್ಡ್ ಮತ್ತು ಓವರ್ ಡೋಸ್ ನೀಡುತ್ತಿರುವುದು ಬೆಳಕಿಗೆ ಬಂದಿದೆ ಎಂದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ

Please follow and like us:

Related posts

Leave a Comment