ಕೊರೊನಾ ಎಫೆಕ್ಟ್ – ಪಾನ್ ಮಸಾಲ, ಗುಟ್ಕಾ ಮಾರಾಟ ಬಂದ್

ಶಿರಾ: ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ತಹಶೀಲ್ದಾರ್ ಸೇರಿದಂತೆ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಗರಾದ್ಯಂತ ಕಿರಾಣಿ ಮತ್ತು ದಿನಸಿ ಅಂಗಡಿಗಳಲ್ಲಿ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಕಿರಾಣಿ ಮತ್ತು ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಗುಟ್ಕಾ, ಪಾನ್, ಬೀಡಿ, ಸಿಗರೇಟ್ ಹಾಗೂ ಮಾತ್ರೆಗಳು ವಶಪಡಿಸಿಕೊಳ್ಳಲಾಗಿದೆ.
ಅಂದ ಹಾಗೇ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತ ಬಂದ್ ಘೋಷಣೆ ಬಳಿಕ ಶಿರಾ ತಾಲ್ಲೂಕಿನ ಅಡಳಿತ ತಾತ್ಕಾಲಿಕವಾಗಿ ಪಾನ್ ಮಸಾಲ ಮತ್ತಿತರ ತಂಬಾಕುಗಳ ಮಾರಾಟಕ್ಕೆ ಬ್ರೇಕ್ ಹಾಕಿತ್ತು.ಆದರೆ ಕೆಲ ಅಂಗಡಿಗಳಲ್ಲಿ ತಂಬಾಕು ಮತ್ತು ಪಾನ್ ಮಸಾಲವನ್ನು ಮಾರಾಟ ಪ್ರಾರಂಭಿಸಿದ್ದರು. ಹೀಗಾಗಿ ಇದರ ಬಗ್ಗೆ ಖಚಿತ ಮಾಹಿತಿ ಪಡೆದ ತಹಶೀಲ್ದಾರ್ ದಾಳಿ ನಡೆಸಿದ್ದಾರೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment