15 ಸಾವಿರ ಬಡ ಕುಟುಂಬಗಳಿಗೆ ತಾಜಾ ತರಕಾರಿ

ಕೆ.ಆರ್.ಪುರಂ(ಬೆAಗಳೂರು):ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿರುವ ವಾರ್ಡಿನ ಬಡ ಜನರಿಗೆ, ಕೊಲಿ ಕಾರ್ಮಿಕರಿಗೆ ೨೦ ಟನ್ ತರಕಾರಿಗಳನ್ನು ೧೫ ಸಾವಿರ ಕುಟುಂಬಗಳಿಗೆ ನೀಡಲಾಗುತ್ತದೆ ಎಂದು ಪಾಲಿಕೆ ಸದಸ್ಯೆ ಶೇತಾ ವಿಜಯ್ ಕುಮಾರ್ ತಿಳಿಸಿದ್ದಾರೆ.
ಮಾಲೂರು ತಾಲ್ಲೂಕಿನ ರೈತರಿಂದ ತರಾಕಾರಿ ಖರೀದಿಸಿರುವ ಬಗ್ಗೆ ಮಾತನಾಡಿದ ಅವರು, ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿ ವಾರ್ಡಿನಲ್ಲಿ ಸುಮಾರು ೧೫ ಸಾವಿರ ಕುಟುಂಬಗಳಿಗೆ ಮಹದೇವಪುರ ಬಿಜೆಪಿ ಘಟಕ ಹಾಗೂ ಸಂಜೀವಿನಿ ಚಾರಿಟಬಲ್ ಟ್ರಸ್ಟ್ವತಿಯಿಂದ ೨೦ ಟನ್ ತರಕಾರಿಗಳನ್ನು ವಿತರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಇದೇ ವೇಳೆ ಮುಖಂಡರಾದ ಹೂಡಿ ವಿಜಯ್ ಕುಮಾರ್, ಅನಿಲ್ ಕುಮಾರ್, ನಾಗರಾಜ್, ರೇಖಾ ಮುಂತಾದವರು ಹಾಜರಿದ್ದರು.

ಕೆ.ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ(ಬೆAಗಳೂರು)

Please follow and like us:

Related posts

Leave a Comment