ಪಾವಡಗದಲ್ಲಿ `ಕೊರೊನಾ’ಗಿಂತ `ನೀರಿನ ಸಮಸ್ಯೆ’ಯ ಆರ್ಭಟ..

ಪಾವಗಡ : ಗಡಿ ತಾಲೂಕು ಪಾವಗಡದ ಜನರಿಗೆ ಕೊರೊನಾಗಿಂತ ನೀರಿನ ಬಗ್ಗೆಯೇ ದೊಡ್ಡ ಚಿಂತೆ ಶುರುವಾಗಿದೆ.
ಸದ್ಯ ಪಾವಗಡ ಪಟ್ಟಣದ ಶಾಂತಿನಗರದಲ್ಲAತೂ ಹಲವು ದಿನಗಳಿಂದ ನೀರಿನ ಸಮಸ್ಯೆ ಹೇಳತೀರದಾಗಿದ್ದು,ಈ ಪ್ರದೇಶಕ್ಕೆ ನೀರು ಪೂರೈಸುವಲ್ಲಿ ಪುರಸಭೆ ಸಂಪೂರ್ಣವಾಗಿ ವಿಫಲವಾಗಿದೆ.
ಅಂದ ಹಾಗೇ ಈ ವಾರ್ಡ್ನಲ್ಲಿ ಹಲವು ದಿನಗಳಿಂದ ನೀರಿನ ಸಮಸ್ಯೆ ಹೆಚ್ಚಾಗಿದ್ದು,ನಲ್ಲಿಗಳಲ್ಲಿ ನೀರು ಬರದ ಕಾರಣ ಟ್ಯಾಂಕರ್ ಮೂಲಕ ನೀರು ಕಳುಹಿಸಲಾಗುತ್ತಿದೆ.ಹೀಗಾಗಿ ನೀರು ಹಿಡಿಯಲು ಸಾಮಾಜಿಕ ಅಂತರವನ್ನು ನೋಡದ ಜನರು ಮುಗಿಬೀಳುತ್ತಿರುವುದು ಇಲ್ಲಿ ಸಾಮಾನ್ಯವಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಲ್ಲಿಕಾರ್ಜುನ.
ಇನ್ನು ಅತ್ತ ರಾಜ್ಯ ಸರ್ಕಾರ ಸಾಮಾಜಿಕ ಅಂತರ ಕಾಯ್ದುಕ್ಕೊಳ್ಳಿ ಅಂತ ಊರೂರಿನಲ್ಲಿ ಮೈಕ್‌ಗಳಲ್ಲಿ ಪ್ರಚಾರ ಮಾಡಿಸುತ್ತಿದ್ರೆ,ಇತ್ತ ಅವರದ್ದೇ ಸ್ಥಳೀಯ ಸಂಸ್ಥೆಯಾದ ಪಾವಗಡದ ಪುರಸಭೆ ಒಂದು ಟ್ಯಾಂಕರ್ ನೀರಿಗಾಗಿ ನೂರಾರು ಜನರ ನೂಕು ನುಗ್ಗಲಿಗೆ ಕಾರಣವಾಗಿ ನಿಂತಿದೆ.
ಒಟ್ನಲ್ಲಿ ಕರ್ನಾಟಕ ಗಡಿ ಭಾಗದಲ್ಲಿ ಕೊರೊನಾ ತಾಂಡವಾಡುತ್ತಿರುವ ಈ ಸಂದರ್ಭದಲ್ಲಿ ಅದೇ ಗಡಿ ಭಾಗದ ತಾಲೂಕಿನಲ್ಲಿ ಜನರು ನೀರಿಗಾಗಿ ಸಾಮಾಜಿಕ ಅಂತರ ನೋಡದೇ ಮುಗಿಬಿದ್ದರೇ ಅಪಾಯ ಮಾತ್ರ ಕಟ್ಟಿಟ್ಟಬುತ್ತಿ..

ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ(ತುಮಕೂರು)

Please follow and like us:

Related posts

Leave a Comment