ಬೇರೆಯವಳ ಜೊತೆ ಇಟ್ಟುಕೊಂಡಿದ್ದ ಸಂಬ0ಧ,ಹೆ0ಡ್ತಿಗೆ ಬೆಂಕಿ ಹಚ್ಚಿದ..!

ಹುಬ್ಬಳ್ಳಿ:ಅದು ೧೩ ವರ್ಷದ ಸಂಸಾರ್ ಅದಕ್ಕೆ ಸಾಕ್ಷಿ ಎಂಬAತೆ ೩ ಮಕ್ಕಳು ಚೆಂದದ ಸಂಸಾರ…ಆದರೆ ಅದ್ಯಾಕೋ ಆ ಗಂಡನಿಗೆ ಹೆಂಡತಿಯ ಮೇಲಿನ ವ್ಯಾಮೋಹ ಕಡಿಮೆ ಆಗಿತ್ತು.ಅಷ್ಟೇ ಅಲ್ಲದೆ ಬೇರೆಯವಳ ಮೇಲೆ ವ್ಯಾಮೋಹ ಬೆಳೆದಿತ್ತು.ಹೀಗಾಗಿ ತನ್ನ ಜೊತೆ ೧೩ ವರ್ಷ ಸುಖ ಸಂತೋಷದಿAದ ಇದ್ದ ತನ್ನ ಮುದ್ದಾದ ಹೆಂಡತಿಗೆ ಗಂಡ ಹಾಗೂ ಆತನ ಮನೆಯವರು ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನ ಮಾಡಿದ್ದಾರೆ..
ಹೌದು ಇಂತಹ ಒಂದು ಘಟನೆಗೆ ಸಾಕ್ಷಿಯಾಗಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯ ಮಾರುತಿ ನಗರದ ಹೇಗ್ಗೇರಿ ಕಾಲನಿಯಲ್ಲಿ.
ಇಲ್ಲಿನ ನಿವಾಸಿ ಕರಿಯಮ್ಮ ಎಂಬ ಗೃಹಿಣಿಯ ಮೇಲೆ ಅವಳ ಗಂಡನ ಮನೆಯವರು ನಿನ್ನೆ ರಾತ್ರಿ ೯.೩೦ರ ಸುಮಾರಿಗೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನ ಮಾಡಿದ್ದಾರೆ ಎಂದು ಕರಿಯಮ್ಮನ ತಾಯಿ ಆರೋಪ ಮಾಡ್ತಿದ್ದಾರೆ…
ಇನ್ನು ಕರಿಯಮ್ಮನ ಗಂಡನಿಗೆ ಬೇರೆ ಹೆಂಗಸರ ಜೊತೆ ಅನೈತಿಕ ಸಂಬAದ ಇತ್ತು.ಇದೇ ವಿಷಯವಾಗಿ ಸಾಕಷ್ಟು ಬಾರಿ ರಾಜಿ ಸಂಧಾನ ಮಾಡಿ ಸಾಕಷ್ಟು ಬಾರಿ ಮಲ್ಲೇಶನಿಗೆ ಬುದ್ದಿವಾದವನ್ನು ಹೇಳಿ ಬರಲಾಗಿತ್ತು.ಇನ್ನು ಇಷ್ಟೇ ಅಲ್ಲದೆ ವರದಕ್ಷಿಣೆ ತರುವಂತೆ ಕೂಡಾ ಸಾಕಷ್ಟು ಬಾರಿ ಕಿರುಕುಳವನ್ನು ಕೊಡುತ್ತಿದ್ದರು.ಅಷ್ಟೇ ಅಲ್ಲದೆ ಅವಳ ಮೇಲೆ ಹಲ್ಲೆ ಕೂಡಾ ಮಾಡಿದ್ದರು ಅಂತಾ ಕರಿಯಮ್ಮನ ತಮ್ಮ ಆರೋಪ ಮಾಡ್ತಿದ್ದಾರೆ…
ಇದಲ್ಲದೆ,ಸಂಬAಧಿಕರು ಹೇಳುವ ಪ್ರಕಾರ ಗಂಡನ ಮನೆಯವರು ಸ್ಥಿತಿವಂತರು ಇದ್ದು,ಅವರಿಗೆ ದುಡ್ಡಿನ ಬಲವು ಇದೆ.ಹೀಗಾಗಿ ಇಂತವರಿಗೆ ಸರಿಯಾದ ಶಿಕ್ಷೆಯಾಗಲಿ.ಜೊತೆಗೆ ನಮಗೆ ನ್ಯಾಯ ಸಿಗುವಂತೆ ಮಾಡಿ ಎಂದು ಮಾಧ್ಯಮದವರ ಮುಂದೆ ತಮ್ಮ ಸಂಕಟವನ್ನು ತೋಡಿಕೊಳ್ಳುತ್ತಿದ್ದಾರೆ…

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment