ಕೂಲಿ ಕಾರ್ಮಿಕರ ನೆರವಿಗೆ ಬಂದ ರಂಗಬೈಲಪ್ಪ-ದಾಸರಹಳ್ಳಿ ಶಾಸಕ ಮಂಜುನಾಥ್

ದಾಸರಹಳ್ಳಿ(ಬೆಂಗಳೂರು):ಬೆAಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚೊಕ್ಕಸಂದ್ರ ವಾರ್ಡನ ನಾಗಸಂದ್ರ ಗ್ರಾಮದಲ್ಲಿ ಕೂಲಿ ಹಾಗೂ ವಲಸೆ ಕಾರ್ಮಿಕರು ಸೇರಿದಂತೆ ಇತರರಿಗೆ ಸ್ಥಳೀಯ ಶಾಸಕ ಆರ್.ಮಂಜುನಾಥ್ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.
ಈ ವೇಳೆ ಮುನಿಸ್ವಾಮಿ, ಗುಂಡಪ್ಪ ಗೌಡ, ಬಿ.ಎನ್.ಜಗದೀಶ್,ಗೋವಿಂದಪ್ಪ,ಬಾಬು,ರAಗಣ್ಣ ಹಾಜರಿದ್ದರು.
ಇನ್ನು ಶಾಸಕರಿಂದ ಆಹಾರ ಧ್ಯಾನಗಳ ಕಿಟ್ ಪಡೆಯಲು ಕೂಲಿ ಕಾರ್ಮಿಕರು, ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು.
ಇದೇ ವೇಳೆ ನಾಗಸಂದ್ರದ ಸೌಭಾಗ್ಯಮ್ಮ ರಂಗಬೈಲಪ್ಪ ಕುಟುಂಬ ಕೂಡ ಆಹಾರ ಪದಾರ್ಥಗಳ ಕಿಟ್ ವಿತರಿಸಿತು.
ಅಂದ ಹಾಗೇ ಸೌಭಾಗ್ಯಮ್ಮ ರಂಗಬೈಲಪ್ಪ, ಮಂಜುಳ, ನೇತ್ರಾ ಚೇತನ ಗೌಡ, ಹೇಮಲತಾ, ಶಶಿಕಲಾ, ಸಂತೋಷ ಕುಮಾರ್ ಕುಟುಂಬದವರು ಸ್ವಂತ ಖರ್ಚಿನಲ್ಲಿ ಅಡುಗೆ ಎಣ್ಣೆ ಸಕ್ಕರೆ ತೋಗರಿಬೇಳೆ, ರವೆ, ಊಪ್ಪು ಸೋಪ್‌ಗಳು ಇರುವ ಆಹಾರ ಪದಾರ್ಥಗಳ ಕಿಟ್ ಸಿದ್ದಪಡಿಸಿ ನಾಗಸಂದ್ರದ ಗ್ರಾಮದಲ್ಲಿ ಬಾಡಿಗೆ ಇದ್ದ ವಲಸೆ ಕಾರ್ಮಿಕರಿಗೆ ವಿತರಿಸಿದರು.ಈ ವೇಳೆ ಇವರೆಲ್ಲರ ಬಗ್ಗೆ ಶಾಸಕರು ಸೇರಿದಂತೆ, ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಎನ್. ಶ್ರೀನಿವಾಸ ಯಾದವ್ ಎಕ್ಸ್ಪ್ರೆಸ್ ಟಿವಿ ದಾಸರಹಳ್ಳಿ(ಬೆಂಗಳೂರು)

Please follow and like us:

Related posts

Leave a Comment