ಮಂಗಳಮುಖಿಯರ ಸಮಸ್ಯೆ ಆಲಿಸಿದ ಶಿರಾ ತಹಶೀಲ್ದಾರ್

ಶಿರಾ(ತುಮಕೂರು):ಲಾಕ್‌ಡೌನ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಮಂಗಳಮುಖಿಯರ ಸಂಕಷ್ಟ ಆಲಿಸಲು ಇದೀಗ ತಾಲೂಕು ಆಡಳಿತ ಮುಂದಾಗಿದೆ.
ಭಿಕ್ಷೆಯೆಲ್ಲದೆ ಕಂಗಲಾಗಿರುವ ಮಂಗಳ ಮುಖಿಯರ ಸ್ಥಳಗಳಿಗೆ ಭೇಟಿ ನೀಡಿದ ಶಿರಾ ತಹಶೀಲ್ದಾರ್ ನಾಹಿದಾ ಜಮ್ ಜಮ್ ಅವರ ನೇತೃತ್ವದ ತಂಡ ಮಂಗಳ ಮುಖಿಯರೊಂದಿಗೆ ಮಾತುಕತೆ ನಡೆಸಿತು.
ತಾವರೆಕೆರೆಯಿಂದ ಶಿರಾ ಹೈವೇ ಮಾರ್ಗದ ಮಧ್ಯದಲ್ಲಿನ ರಸ್ತೆ ಬದಿಯಲ್ಲಿ ವಾಸವಿರುವ ಮಂಗಳಮುಖಿಯರ ಆಶ್ರಯ, ಆರೋಗ್ಯ ಮತ್ತು ಊಟದ ವ್ಯವಸ್ಥೆಯ ಬಗ್ಗೆ ವಿಚಾರಿಸಿದ ಅಧಿಕಾರಿಗಳ ತಂಡ ಆಹಾರಕ್ಕೆ ತೊಂದರೆಯಾಗದAತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment