ಚರಂಡಿಯಲ್ಲಿ ಕಲ್ಲಂಗಡಿ ಹಣ್ಣು ತೊಳೆದು ಮಾರುತ್ತಿದ್ದ ಇಬ್ಬರ ಬಂಧನ

ಚಿಕ್ಕೋಡಿ(ಬೆಳಗಾವಿ):ಚರAಡಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನ ತೊಳೆದು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಸವೇಶ್ಚರ ಚೌಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಿಪ್ಪಾಣಿ ಪಟ್ಟಣದ ಭೋಪಳೆ ಗಲ್ಲಿಯ ಶಾಬಾಜ್ ಮುನ್ನಾ ಸತಾರಿ (೨೦) ಹಾಗೂ ರಿಯಾನ್ ಆಯಾಜ್ ಮಡ್ಡೆ (೧೯) ಬಂಧಿತರು. ಸದ್ಯ ಈ ಯುವಕರು ಚರಂಡಿಯಲ್ಲಿ ಹಣ್ಣುಗಳನ್ನು ತೊಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ನೋಡಿದ್ದ ನಿಪ್ಪಾಣಿಯ ಕೆಲವರು ಆರೋಪಿಗಳನ್ನು ಗುರುತಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಈ ಕುರಿತು ಪೊಲೀಸರ ಪ್ರಕರಣ ದಾಖಲಿಸಿಕೊಂಡು, ಬಂಧಿತರನ್ನು ಜೈಲಿಗೆ ಅಟ್ಟಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಚಿಕ್ಕೋಡಿ(ಬೆಳಗಾವಿ)

Please follow and like us:

Related posts

Leave a Comment