ಕೈ ಮುಗಿದ್ರೂ ಕೇಳಿಲ್ಲ,ಲಾಠಿಯಲ್ಲಿ ಹೊಡೆದ್ರೂ ಸುಮ್ಮನಾಗಿಲ್ಲ..ಬಾದಾಮಿ ಜನ್ರಿಗೆ ಇನ್ನೇಗೇ ಹೇಳಬೇಕು..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.ಆದರೆ ಜಿಲ್ಲೆಯ ಬಾದಾಮಿ ಜನರು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಸದ್ಯ ಇಲ್ಲಿ ಲಾಕ್‌ಡೌನ್ ಇದ್ರು ಅದಕ್ಕೆ ಕ್ಯಾರೆ ಎನ್ನದೇ ಬೆಳಿಗ್ಗೆಯಿಂದ ತರಕಾರಿ,ದಿನಸಿ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಲು ಪ್ರಮುಖ ರಸ್ತೆಗಳಲ್ಲಿ ಗುಂಪು ಗುಂಪಾಗಿ ಸೇರುತ್ತಿದ್ದಾರೆ.ಜೊತೆಗೆ ಅಂಗಡಿಗಳ ಎದುರು ನಿಲ್ಲುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವಸ್ತುಗಳ ಖರೀದಿ ಮುಗಿ ಬೀಳುತ್ತಿದ್ದಾರೆ.
ವಿಪರ್ಯಾಸವೆಂದರೆ ಪೊಲೀಸರಿಂದ ಹಿಡಿದು ಇಡೀ ಬಾದಾಮಿ ತಾಲೂಕು ಆಡಳಿತ ಜನರಲ್ಲಿ ಕೈ ಮುಗಿದು ಕೇಳಿಕೊಂಡರೂ ಜನರು ಮಾತ್ರ ಇದನ್ನ ಲೆಕ್ಕಿಸದ ಜನರು ತಮ್ಮ ಪಾಡಿಗೆ ತಾವು ಇಷ್ಟ ಬಂದ ಹಾಗೆ ತಿರುಗಾಟ ನಡೆಸಿದ್ದಾರೆ.
ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ೨೧ ಸೋಂಕಿತರು ಪತ್ತೆಯಾಗಿದ್ದು,ಸದ್ಯ ರೆಡ್‌ಜೋನ್ ಜಿಲ್ಲೆಯಾಗಿ ಘೋಷಣೆ ಕೂಡ ಆಗಿದೆ.ಆದರೂ ಇದಕ್ಕೆ ಜಪ್ಪಯ್ಯ ಎನ್ನದ ಜನರು ಬಿಂದಾಸ್ ಆಗಿ ಮನೆಯಿಂದ ಹೊರಬಂದು ಬೀದಿ ಬೀದಿಗಳಲ್ಲಿ ಬೇಕಾಬಿಟ್ಟಿಯಾಗಿ ತಿರುಗಾಟ ನಡೆಸಿದ್ದಾರೆ.
ಒಟ್ನಲ್ಲಿ ಕೈ ಮುಗಿದು ಬೇಡಿಕೊಂಡರು ಜನ ಬಗ್ಗದ ಪರಿಣಾಮ ಅದ್ಯಾಕೋ ಬೇರೆ ಕ್ರಮಗಳನ್ನು ಅನುಸರಿಸದೇ ಬಾದಾಮಿ ತಾಲೂಕು ಆಡಳಿತ ಸುಮ್ಮನೆ ಕುಳಿತ್ತಿರೋದು ಭಾರೀ ಅನುಮಾನ ಹುಟ್ಟುಹಾಕುವಂತೆ ಮಾಡಿದೆ.

ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Please follow and like us:

Related posts

Leave a Comment