ನೀವು ಯಾಕೇ ಎಟಿಎಂಗೆ ಹೋಗಿತ್ತೀರಾ..ಅದೇ ನಿಮ್ಮ ಮನೆ ಬಾಗಿಲಿಗೆ ಬರುತ್ತೆ..

ಕಲಬುರಗಿ: ಪ್ರಸಕ್ತ ಲಾಕ್ ಡೌನ್ ಸಂದರ್ಭದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್, ಮನೆ-ಮನೆಗೆ ತೆರಳಿ ತನ್ನ ಗ್ರಾಹಕರಿಗೆ ಹಣ ತಲುಪಿಸುವ ಕಾರ್ಯ ಮಾಡುತ್ತಿದೆ.
ಮೊಬೈಲ್(ಸಂಚಾರಿ)ಎಟಿಎA ಮೂಲಕ ಪ್ರತಿನಿತ್ಯ ಕಲಬುರಗಿ ನಗರದ ವಿವಿಧ ಬಡಾವಣೆಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳುತ್ತಿದ್ದು,ಈ ಮೂಲಕ ಗ್ರಾಹಕರು ಹಣ ಡ್ರಾ ಮಾಡಿಕೊಳ್ಳಬಹುದು ಎಂದು ಬ್ಯಾಂಕಿನ ಕಲಬುರಗಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಬಿ.ಜಿ.ಸಿದ್ದೇಶಪ್ಪ ತಿಳಿಸಿದ್ದಾರೆ.
ಪ್ರಮುಖವಾಗಿ ಮಹಿಳೆಯರ ಜನ್-ಧನ್ ಖಾತೆಯ ಹಣ ಮತ್ತು ಪಿಎಂಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯಬಹುದು. ಅಷ್ಟೇಯಲ್ಲ, ಇತರೆ ಯಾವುದೇ ಬ್ಯಾಂಕಿನ ಗ್ರಾಹಕರೂ ಪ್ರತಿದಿನ ೨೫ ಸಾವಿರದವರೆಗೆ ಹಣವನ್ನು ಎಟಿಎಂ ಕಾರ್ಡ್ ಬಳಸಿ ಡ್ರಾ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಇನ್ನು ಜಿಲ್ಲೆಯ ಏಕೈಕ ಸಂಚಾರಿ ಎಟಿಎಂ ವಾಹನ ಇದಾಗಿದೆ.ಧ್ವನಿವರ್ಧಕ ಮುಖಾಂತರ ಪ್ರಚಾರ ಮಾಡುತ್ತಾ ಬೆಳಿಗ್ಗೆ ೮ ರಿಂದ ರಾತ್ರಿ ೮ ರವರೆಗೆ ಸಂಚಾರ ನಡೆಸಲಿದೆ. ತಮ್ಮ-ತಮ್ಮ ಪ್ರದೇಶಗಳಿಗೆ ವಾಹನ ಬಂದಾಗ, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಳಿಸಿದ್ದಾರೆ.
ಎಟಿಎಂನಿAದ ಹಣ ಪಡೆಯುವ ಸಂದರ್ಭದಲ್ಲಿ ಪ್ರತಿಯೊಬ್ಬ ಗ್ರಾಹಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಕಲಬುರಗಿ

Please follow and like us:

Related posts

Leave a Comment