ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನಿಗೆ ಧಾರವಾಡ ಕಾಂಗ್ರೆಸ್ ನೆರವು

ಹುಬ್ಬಳ್ಳಿ:ನಗರದ ಎಸ್ ಡಿಎಂ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನಿಗೆ ಜಿಲ್ಲಾ ಕಾಂಗ್ರೆಸ್ ನೆರವಾಗುವ ಮೂಲಕ ಮಾನವೀಯತೆ ಮೆರೆದಿದೆ.
ನಾಗರಾಜ್ ಬಡಿಗೇರ ಎನ್ನುವ ಯುವಕ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ದಾಖಲಾಗಿದ್ದು,ಐಸಿಯುನಲ್ಲಿ ಇಡಲಾಗಿದೆ. ಅವರ ಕುಟುಂಬ ವರ್ಗಕ್ಕೆ ಈ ಲಾಕ್‌ಡೌನ್ ಸ್ಥಿತಿಯಲ್ಲಿ ಉದ್ಯೋಗವಿಲ್ಲದೆ ಊಟಕ್ಕೂ ಕೂಡ ಕಷ್ಟಪಡುವ ಈ ಸಂದರ್ಭದಲ್ಲಿ ಆಸ್ಪತ್ರೆಯ ಖರ್ಚು ಗಾಯದ ಮೇಲೆ ಬರೇ ನೀಡಿದಂತಾಗಿದೆ.
ಇದನ್ನು ಅರಿತ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ನಾಗರಾಜ್ ಅವರ ಆರೋಗ್ಯ ವಿಚಾರಿಸಿ,ಬಳಿಕ ನಾಗರಾಜ ಬಡಿಗೇರ ಅವರ ತಾಯಿ ಹಾಗೂ ಕುಟುಂಬ ವರ್ಗದವರಿಗೆ ಹತ್ತು ಸಾವಿರ ರೂಪಾಯಿಗಳನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನೀಡಿದರು.
ಈ ರೀತಿ ಅತೀ ಕಷ್ಟದಲ್ಲಿರುವ ರೋಗಿಗಳ ಕುಟುಂಬಸ್ಥರಿಗೆ ಕೈಲಾದ ಸಹಾಯವನ್ನು ಕಾಂಗ್ರೆಸ್ ಮಾಡುತ್ತಿದೆ.ಲಾಕ್‌ಡೌನಿನ ಸಂದಿಗ್ಧ ಪರಿಸ್ಥಿತಿಯಲ್ಲಿದ್ದವರು ನಮ್ಮನು ಸಂಪರ್ಕಿಸಿದ್ರೆ ಪಕ್ಷದ ವತಿಯಿಂದ ಸಹಾಯ ಮಾಡುವದಾಗಿ ತಿಳಿಸಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment