ಮುಳಬಾಗಿಲಿನಲ್ಲಿಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ;ಕಳ್ಳಭಟ್ಟಿ ವಶ

ಮುಳಬಾಗಿಲು(ಕೋಲಾರ):ಲಾಕ್ ಡೌನ್ ಹಿನ್ನಲೆಯಲ್ಲಿ ಮದ್ಯದಂಗಡಿಗಳು ಬಾಗಿಲು ಹಾಕಿವೆ. ಹೀಗಾಗಿ ಎಣ್ಣೆ ಪ್ರಿಯರು ಕಳ್ಳಭಟ್ಟಿ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಕಳ್ಳಭಟ್ಟಿ ತಯಾರಿಕೆ ರಾಜ್ಯದಲ್ಲಿ ಭರ್ಜರಿಯಾಗಿ ಸಾಗಿದೆ. ಈ ಹಿನ್ನಲೆಯಲ್ಲಿ ಅಬಕಾರಿ ಅಧಿಕಾರಿಗಳಿಗೆ ಕೈ ತುಂಬಾ ಕೆಲಸ.
ಕೋಲಾರ ಮುಳಬಾಗಿಲಿನಲ್ಲಿ ಕಳ್ಳಭಟ್ಟಿ ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಮುಳಬಾಗಿಲು ವಿಭಾಗದ ಅಬಕಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಳಬಾಗಿಲು ತಾಲ್ಲೂಕು ಹೆಬ್ಬಣಿ ಗ್ರಾಮ ದೊಡ್ಡನಾಗವಾರ ಗ್ರಾಮದ ವೆಂಕಟೇಶ್ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಬಂಧಿತನಿಂದ 15.5 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದೆ.

ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು(ಕೋಲಾರ)

Please follow and like us:

Related posts

Leave a Comment