ಜಮೀರ್‌ಗೆ ಸಿದ್ದು ಸಖತ್ ಕ್ಲಾಸ್..

ಬೆಂಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಾಟೆ ಹಿನ್ನೆಲೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್‌ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾ ಅಂತ ತಿಳಿದು ಬಂದಿದೆ.
ನಿನ್ನೆಯಷ್ಟೆ ಜಮೀರ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತರಾಟೆಗೆ ತೆಗೆದುಕೊಂಡಿದ್ದರು.ಇದಾದ ಬಳಿಕ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಸರಿಯಾಗಿ ಕ್ಲಾಸ್‌ತೆಗೆದುಕೊಂಡಿದ್ದು,ಇನ್ನೊಮ್ಮೆ ಹೀಗಾದರೇ ಸರಿ ಇರಲ್ಲ ಎಂದು ನೇರವಾಗಿಯೇ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ಕೆಲ ಮೂಲಗಳು ಸ್ಪಷ್ಟಪಡಿಸಿವೆ.
ಇನ್ನು ಪಾದರಾಯನಪುರದಲ್ಲಿ ಮೂರುದಿನಗಳ ಹಿಂದೆ ನಡೆದ ಗಲಾಟೆಗೆ ಜಮೀರ್ ಅಹಮದ್ ಅವರೇ ಕಾರಣ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಮಾಧ್ಯಮದಲ್ಲಿಯೂ ಅದು ಬಿತ್ತರಗೊಂಡಿದೆ. ಇದರಿಂದ ಕಾಂಗ್ರೆಸ್‌ಗೆ ಮುಜುಗರ ಉಂಟಾಗಿದೆ.
ಜೊತೆಗೆ ತನ್ನ ಅಪ್ಪಣೆ ಇಲ್ಲದೇ ಅಧಿಕಾರಿಗಳು ರಾತ್ರಿ ಹೊತ್ತು ತಪಾಸಣೆಗೆ ಬರಬಾರದಾಗಿತ್ತು ಎಂದು ಜಮೀರ್ ಹೇಳಿದ್ದು ಸರಿಯಲ್ಲ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆನ್ನಲಾಗಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment