ಬೆಂಗಳೂರಿನ ಹಜ್ ಭವನಕ್ಕೆ ಪಾದರಾಯನಪುರದ ಪಾಪಿಗಳು ಶಿಫ್ಟ್

ಬೆಂಗಳೂರು : ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರದ ಪಾಪಿಗಳ ಪೈಕಿ ೫ ಆರೋಪಿಗಳಿಗೆ ಜನರಿಗೆ ಕೊರೋನಾ ಬಂದಿರುವ ಹಿನ್ನಲೆಯಲ್ಲಿ ೧೧೬ ಮಂದಿ ಆರೋಪಿಗಳನ್ನು ಬೆಂಗಳೂರಿನ ಹಜ್ ಭವನಕ್ಕೆ ಶಿಫ್ಟ್ ಮಾಡಲಾಗಿದೆ.
ರಾಮನಗರದಿಂದ ೭ ಬಸ್ ಗಳಲ್ಲಿ ಆರೋಪಿಗಳನ್ನು ಕರೆ ತರಲಾಗಿದ್ದು, ಇನ್ನುಳಿದ ೭ ಬಸ್ ಗಳಲ್ಲಿ ಪೊಲೀಸರು ಹಾಗೂ ಆರೋಗ್ಯ ಇಲಾಖೆಗಳು ಅಧಿಕಾರಿಗಳು ಬಂದಿದ್ದಾರೆ.
ಜೈಲಿನಿ0ದ ಹೊರಡುವ ಮುನ್ನ ಎಲ್ಲಾ ಆರೋಪಿಗಳ ಆರೋಗ್ಯ ತಪಾಸಣೆಯನ್ನು ಕೂಡಾ ಮಾಡಲಾಗಿದೆ. ಕೊರೋನಾ ಸೋಂಕಿನ ಮುಂಜಾಗ್ರತ ಕ್ರಮವಾಗಿ ಈ ದುಷ್ಕರ್ಮಿಗಳು ಇಲ್ಲಿ ಕ್ವಾರಂಟೈನ್ ಅವಧಿಯನ್ನು ಕಳೆಯಲಿದ್ದಾರೆ.
ಇನ್ನು ೧೧೬ ಆರೋಪಿಗಳ ಮೊದಲ ಲ್ಯಾಬ್ ರಿಪೋರ್ಟ್ ನೆಗೆಟಿವ್ ಎಂದು ಬಂದಿದರೂ ಕೂಡಾ ಆತಂಕ ದೂರವಾಗಿಲ್ಲ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಹಾಗೂ ಪೊಲೀಸ್ ಸಿಬ್ಬಂದಿಗೆ ಪಿಪಿಇ ಕಿಟ್ ಒದಗಿಸಲಾಗಿತ್ತು. ಮಾತ್ರವಲ್ಲದೆ ಎಲ್ಲಾ ಆರೋಪಿಗಳ ಕೈಗೆ ಕೋಳವನ್ನು ಕೂಡಾ ತೊಡಿಸಲಾಗಿತ್ತು.
ಇನ್ನು ವೀಸಾ ಅವಧಿ ಮುಗಿದ ನಂತರವೂ ಬೆಂಗಳೂರಿನ ಮಸೀದಿಯೊಂದರಲ್ಲಿ ಅಡಗಿ ಬಳಿಕ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಹಜ್ ಭವನದಲ್ಲಿ ಕ್ವಾರಂಟೈನ್ ನಲ್ಲಿದ್ದ ವಿದೇಶಿ ಮೌಲ್ವಿಗಳನ್ನು ಹೊಟೇಲ್ ಗೆ ಶಿಫ್ಟ್ ಮಾಡಲಾಗಿದೆ. ಪ್ರವಾಸಿ ವೀಸಾದಡಿಯಲ್ಲಿ ಬಂದ ಇವರು ವೀಸಾ ನಿಯಮಕ್ಕೆ ವಿರುದ್ಧವಾಗಿ ಧರ್ಮ ಪ್ರಚಾರದಲ್ಲಿ ತೊಡಗಿದ್ದರು.
ಇದೇ ಪಾದರಾಯನಪುರದ ಪಾಪಿಗಳು ರಾಮನಗರ ಜೈಲಿನಲ್ಲಿದ್ದ ವೇಳೆ ಬಿರಿಯಾನಿ ಹಾಗೂ ಮಾಂಸಹಾರದ ಆಸೆಯಿಂದ ಹಜ್ ಭವನಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದ್ದರು. ಇದೀಗ ಎಲ್ಲಿ ಕೊರೋನಾ ಸೋಂಕು ಬರುತ್ತದೋ ಅನ್ನುವ ಆತಂಕದಿAದ ಹಜ್ ಭವನ ಸೇರಿದ್ದಾರೆ.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment