ಮೂರು ದಿನಗಳ ಕಾಲ ಪೂರ್ವಮುಂಗಾರು ಮಳೆ..

ಬೆಂಗಳೂರು: ನಗರದಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಮೂರು ದಿನಗಳ ಕಾಲ ಪೂರ್ವಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.ನಿನ್ನೆ ರಾತ್ರಿ ಅಲ್ಲಲ್ಲಿ ಕೊಂಚ ಮಳೆಯಾಗಿತ್ತು.
ಸದ್ಯ ಯಶವಂತಪುರ, ಮಲ್ಲೇಶ್ವರಂ, ಮೆಜೆಸ್ಟಿಕ್, ಚಿಕ್ಕಪೇಟೆ, ಎಂಜಿ ರಸ್ತೆ, ಸದಾಶಿವನಗರ ಸೇರಿದಂತೆ ಹಲವು ಕಡೆ ಭಾರಿ ಮಳೆಯಾಗಿದೆ. ಇನ್ನೂ ಮೂರು ದಿನ ಇದೇ ರೀತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದರ ಜೊತೆಗೆ ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಒಣಗಿದ ಮರಗಳು ಬೀಳುವ ಸಾಧ್ಯತೆ ಇದೆ.ಈಗಾಗಲೇ ರಸ್ತೆಗಳು ಬ್ಲಾಕ್ ಆಗಿವೆ. ಕೊರೊನಾ ಹೋರಾಟದ ನಡುವೆ ಬಿಬಿಎಂಪಿ ಮಳೆ ಬಗ್ಗೆ ಮುನ್ನೆಚ್ಚರಿಕೆ ಹಾಗೂ ರಸ್ತೆ ಮೇಲಿನ ನೀರು ತೆರವಿಗೂ ಮುಂದಾಗಬೇಕಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment