ಮಾನಸಿಕ ಅಸ್ವಸ್ಥನ ಆರೈಕೆ ಮಾಡಿದ ಪೊಲೀಸ್ ಸಿಬ್ಬಂದಿ

ಟಿ.ನರಸೀಪುರ(ಮೈಸೂರು): ಕೊರೊನಾ ಆರ್ಭಟದ ನಡುವೆ ಮಾನಸಿಕ ಅಸ್ವಸ್ಥರ ಸ್ಥಿತಿಯನ್ನ ನೋಡಿದ್ರೆ ದೇವರಿಗೇ ಪ್ರೀತಿ ಎನ್ನುವಂತಾಗಿತ್ತದೆ.ಯಾಕAದ್ರೆ ಇವರನ್ನ ಆರೈಕೆ ಮಾಡುವುದಿರಲಿ, ಸರಿಯಾಗಿ ಅವರ ಕಡೆ ತಿರುಗಿಯೂ ನೋಡುವುದಕೋ ಜನರುಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೆ ಮೈಸೂರಿನ ಟಿ.ನರಸೀಪುರ ತಾಲೂಕಿನಲ್ಲಿ ಮಾತ್ರ ಪೊಲೀಸರು ಮಾತ್ರ ಮಾನಸಿಕ ಅಸ್ವಸ್ಥನ ಆರೈಕೆ ಮಾಡಿ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದ್ದಾರೆ.
ಹೌದು, ಲಾಕ್‌ಡೌನ್‌ನಿಂದಾಗಿ ಸುಮಾರು ೧ ತಿಂಗಳಿನಿAದ ಆಹಾರವಿಲ್ಲದೆ ಬೀದಿ ಬೀದಿಯಲ್ಲಿ ಅಲೆಯುತ್ತಿದ್ದ ಸುಮಾರು ೪೦ ವಯಸ್ಸಿನ ಮಾನಸಿಕ ಅಸ್ವಸ್ಥನಿಗೆ ಆಹಾರ ನೀಡಿ,ಕೇಶಮುಂಡನೆ ಮಾಡಿ ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡಿದ ಟಿ.ನರಸೀಪುರ ತಾಲೂಕಿನ ಬನ್ನೂರಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪುನೀತ್ ಮತ್ತು ಸಿಬ್ಬಂದಿಗಳು ಆತನನ್ನು ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಒಟ್ಟಾರೆ ಲಾಕ್‌ಡೌನ್‌ನಿಂದ ಹಗಲು ರಾತ್ರಿ ಎನ್ನದೇ ಸೈನಿಕರಂತೆ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ ಇಂಥ ಮಾನಸಿಕ ಅಸ್ವಸ್ಥರಿಗೆ ಹೊಸ ರೂಪ ನೀಡಿದ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೇವಣ್ಣ ಎಕ್ಸ್ ಪ್ರೆಸ್ ಟಿವಿ ಟಿ.ನರಸೀಪುರ(ಮೈಸೂರು)

Please follow and like us:

Related posts

Leave a Comment