ಮಂಡ್ಯ ಶಾಸಕ ಮತ್ತವನ ಪುತ್ರನ ಗೂಂಡಾಗಿರಿ..

ಮಂಡ್ಯ:ಶಾಸಕ ಹಾಗೂ ಆತನ ಮಗ ಗೂಂಡಾಗಿರಿ ನಡೆಸಿ ಪತ್ರಕರ್ತರು ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರೋ ಘಟನೆ ಮಂಡ್ಯದಲ್ಲಿ ನಡೆದಿದೆ.
ಸದ್ಯ ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರ ಕೋವಿಡ್ ೧೯ ಟೆಸ್ಟ್ ಇತ್ತು. ಆದರೆ ಅಂಬೇಡ್ಕರ್ ಭವನದ ಬಳಿಯೇ ವಿಧಾನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಮನೆ ಇದೆ.ಹೀಗಾಗಿ ಟೆಸ್ಟ್ ಮಾಡಬೇಡಿ,ಕೂಡಲೇ ಕೋವಿಡ್ ಟೆಸ್ಟ್ ನಿಲ್ಲಿಸಿ ಎಂದು ತನ್ನ ಬೆಂಬಲಿಗರೊAದಿಗೆ ಶ್ರೀಕಂಠೇಗೌಡ ಪತ್ರಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗೆ ಅವಾಜ್ ಹಾಕಿ ಖ್ಯಾತೆ ತೆಗೆದಿದ್ದಾರೆ.
ಅಂದ ಹಾಗೇ ಅಂಬೇಡ್ಕರ್ ಭವನದಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಪತ್ರಕರ್ತರಿಗೆ ಕೊರೋನಾ ಟೆಸ್ಟ್ ನಡೆಸಲಾಗುತ್ತಿತ್ತು. ಈ ವೇಳೆ ಸ್ಥಳೀಯರೊಂದಿಗೆ ಗುಂಪು ಕಟ್ಟಿಕೊಂಡು ಬಂದ ಒಐಅ ಶ್ರೀಕಂಠೇಗೌಡ ಪತ್ರಕರ್ತರಿಗೆ ಕೊರೋನಾ ಟೆಸ್ಚ್ ಮಾಡಬೇಡಿ ಎಂದು ಆಗ್ರಹಿಸಿದ್ದಾರೆ.ಅಕ್ಕಪಕ್ಕದಲ್ಲಿ ಮನೆ ಇದೆ, ಇಲ್ಲಿ ಟೆಸ್ಟ್ ಮಾಡಬೇಡಿ ಎಂದು ತಗಾದೆ ತೆಗೆದು ಗೂಂಡಾಗಿರಿ ಮಾಡಿದ್ದಾರೆ. ಶಾಸಕನ ಗೂಂಡಾಗಿರಿ ಮಗ ಕೂಡಾ ಸಾಥ್ ಕೊಟ್ಟಿದ್ದು ಪಾಳೇಗಾರಿಕೆ ತೋರಿದ್ದಾರೆ.
ಇನ್ನು ಶ್ರೀಕಂಠೇಗೌಡನ ಪುತ್ರ ಪುತ್ರ ಪತ್ರಕರ್ತರು ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು,ಕೂಡಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಮಂಡ್ಯ

Please follow and like us:

Related posts

Leave a Comment