ದೇಶದಲ್ಲಿ ಕೊರೊನಾ ಸೋಂಕು ಶೇ.6ಕ್ಕೆ ಇಳಿಕೆ

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದು ಬೆಳಕಿಗೆ ಬಂದಿದ್ದು,ಸ್ವತಃ ಕೇಂದ್ರ ಆರೋಗ್ಯ ಇಲಾಖೆ ಇದರ ಬಗ್ಗೆ ಮಾಹಿತಿ ನೀಡಿದೆ.
ಅಂದ ಹಾಗೇ ದೇಶಾದ್ಯಂತ ಲಾಕ್ ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಕೂಡ ನಿಯಂತ್ರಣಕ್ಕೆ ಬರುತ್ತಿದ್ದು, ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಹೇಳಿದೆ.
ಸದ್ಯ ಮಾರ್ಚ್ ೨೩ರಿಂದ ಏಪ್ರಿಲ್ ೨೩ರವರೆಗೂ ಸುಮಾರು ೫ ಲಕ್ಷ ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರ ಪರಿಣಾಮ ಒಂದು ತಿಂಗಳ ಅವಧಿಯಲ್ಲಿ ಸೋಂಕಿತರ ಪತ್ತೆ ಪ್ರಮಾಣ ಜಾಸ್ತಿ ಆಗಿತ್ತು. ಆದರೆ ಈಗ ಕೊರೋನಾ ಪರೀಕ್ಷೆ ಪ್ರಮಾಣ ಇದರ ೩೩ ಪಟ್ಟು ಹೆಚ್ಚಿಸಲಾಗಿದೆ. ಹೀಗಿದ್ದರೂ ಕೊರೋನಾ ಹರಡುವಿಕೆ ಪ್ರಮಾಣ ಶೇ.೬ರಷ್ಟು ಮಾತ್ರ ಇದೆ ಎಂದು ತಿಳಿದು ಬಂದಿದೆ.
ಇನ್ನು ಪ್ರತಿದಿನ ಶೇ.೧೦೦ರ ಗಡಿ ದಾಟುತ್ತಿದ್ದ ಕೊರೊನಾ ಸೋಂಕು ಈಗ ದಿಢೀರ್ ಆಗಿ ಶೇ.೬ಕ್ಕೆ ಇಳಿಕೆಯಾಗಿದೆ.ಲಾಕ್‌ಡೌನ್ ಮುಗಿದ ನಂತರ ಇನ್ನಷ್ಟು ಕಡಿಮೆಯಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದೇ ವೇಳೆ ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಮುನ್ನ ಕೇವಲ ೩.೪ ದಿನದಲ್ಲಿ ಕೊವಿಡ್-೧೯ ಸೋಂಕಿತರ ಸಂಖ್ಯೆಯು ಡಬಲ್ ಆಗುತ್ತಿತ್ತು. ಈಗ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು ೯.೧ ದಿನಗಳು ಬೇಕಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ದೇಶದಲ್ಲಿ ಕೊರೋನಾ ವೈರಸ್(ಕೊವಿಡ್ -೧೯)ಸೋಂಕಿತರ ಪೈಕಿ ೫,೦೦೦ಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದು,ಇದರೊಂದಿಗೆ ಚೇತರಿಕೆ ಪ್ರಮಾಣ ಶೇ. ೨೦.೬೬ಕ್ಕೆ ಏರಿಕೆಯಾಗಿದೆ. ಈ ನಡುವೆ ಒಟ್ಟು ಸೋಂಕಿತ ಪ್ರಕರಣಗಳ ಪೈಕಿ ಸಾವಿನ ಪ್ರಮಾಣ ಸುಮಾರು ಶೇ ೩.೧ರಷ್ಟಿದೆ.
ದೇಶದಲ್ಲಿ ಕೊರೋನಾ ವೈರಸ್‌ನ ಸದ್ಯದ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಚಿವರ ತಂಡದ ೧೩ನೇ ಸಭೆ ಶನಿವಾರ ಇಲ್ಲಿ ನಡೆಯಿತು.
ಈವರೆಗೆ ೫,೦೬೨ ಜನರು ಚೇತರಿಕೆ ಕಾಣುವುದರೊಂದಿಗೆ ಶೇ. ೨೦.೬೬ ರಷ್ಟು ರೋಗಿಗಳನ್ನು ಗುಣಪಡಿಸಲಾಗಿದೆ ಶುಕ್ರವಾರದಿಂದ ೧೪೨೯ ಹೊಸ ಪ್ರಕರಣಗಳು ವರದಿಯಾಗಿದೆ. ಅಲ್ಲದೆ, ಒಟ್ಟು ೨೪,೫೦೬ ಜನರಲ್ಲಿ ಕೊವಿಡ್-೧೯ ಸೋಂಕು ದೃಢಪಟ್ಟಿದೆ ಎಂದು ಸಚಿವರ ತಂಡಕ್ಕೆ ಮಾಹಿತಿ ನೀಡಲಾಯಿತು.
ಸದ್ಯ ಸೋಂಕಿನಿAದ ಸಾವಿನ ಪ್ರಮಾಣ ಶೇ. ೩.೧ ರಷ್ಟಿದ್ದರೆ, ಚೇತರಿಕೆ ಪ್ರಮಾಣ ಶೇ. ೨೦ ಕ್ಕಿಂತ ಹೆಚ್ಚಿದೆ. ಇದು ಅನೇಕ ದೇಶಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ದೇಶದಲ್ಲಿ ಕ್ಲಸ್ಟರ್ ನಿರ್ವಹಣೆ ಮತ್ತು ಕಂಟೈನ್‌ಮೆAಟ್ ಕಾರ್ಯ ತಂತ್ರದೊAದಿಗೆ ಲಾಕ್‌ಡೌನ್ ಜಾರಿ ಕ್ರಮವು ಸಕಾರಾತ್ಮಕ ಪರಿಣಾಮವೆಂದು ಪರಿಗಣಿಸಬಹುದು.
ಸಭೆಯಲ್ಲಿ ಡಾ.ಹರ್ಷವರ್ಧನ್‌ರಲ್ಲದೆ,ನಾಗರಿಕ ವಿಮಾನಯಾನ ಸಚಿವ ಶ್ರೀಹರ್‌ದೀಪ್ ಸಿಂಗ್ ಪುರಿ, ವಿದೇಶಾಂಗ ಸಚಿವ ಡಾ.ಎಸ್.ಜೈ ಶಂಕರ್, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ,ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಕ್ ಮಾಂಡವಿಯಾ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಅಶ್ವಿನಿಕುಮಾರ್ ಚೌಬೆ ಮತ್ತು ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಉಪಸ್ಥಿತರಿದ್ದರು.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment