ಪಿರಿಯಾಪಟ್ಟಣ ಶಾಸಕರಿಂದ ಆಹಾರದ ಕಿಟ್ ದುರುಪಯೋಗ..

ಪಿರಿಯಾಪಟ್ಟಣ(ಮೈಸೂರು) : ದಾನಿಗಳು ನೀಡಿದ ಆಹಾರ ಸಾಮಗ್ರಿಗಳನ್ನು ಶಾಸಕ ಕೆ.ಮಹದೇವ ದುರುಪಯೋಗಪಡಿಸಿಕೊಂಡಿದ್ದಾರೆAದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಡಾ.ಪ್ರಕಾಶ್ ಬುಬುರಾವ್ ಆರೋಪಿಸಿದ್ದಾರೆ.
ಇಂದಿಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಲಾಕ್‌ಡೌನ್ ಅವಧಿಯಲ್ಲಿ ತಾಲ್ಲೂಕಿನಲ್ಲಿ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬಗಳಿಗೆ ದೀನ ದಲಿತರಿಗೆ ನೆರವು ನೀಡುವಂತೆ ತಾಲ್ಲೂಕು ಆಡಳಿತ ಮನವಿ ಮಾಡಿತ್ತು. ಹೀಗಾಗಿ ಈ ಮನವಿಗೆ ಸ್ಪಂದಿಸಿ ಹಲವು ದಾನಿಗಳು ನೀಡಿದ ನೆರವನ್ನು ಶಾಸಕ ಕೆ ಮಹದೇವ್ ವೈಯಕ್ತಿಕ ಕೊಡುಗೆ ಎಂಬAತೆ ತಮ್ಮ ಹೆಸರು ಮುದ್ರಿಸಿಕೊಂಡು ಹಂಚುತ್ತಿದ್ದಾರೆ ಎಂದು ದೂರಿದರು.
ಇನ್ನು ಕಳೆದ ೧೬ರಂದು ತಹಶೀಲ್ದಾರ್ ಶ್ವೇತ ಎನ್ ರವೀಂದ್ರ ತಾಲ್ಲೂಕು ಕಚೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಭೆ ಕರೆದಿದ್ದರು.
ಈ ಸಭೆಯಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ತಾಲ್ಲೂಕಿನ ಕುಟುಂಬಗಳಿಗೆ ಸರ್ಕಾರದಿಂದ ಯಾವುದೇ ವಿಶೇಷ ಅನುದಾನ ಬಂದಿಲ್ಲ. ಹಾಗಾಗಿ ಸಂಘ ಸಂಸ್ಥೆಗಳು ಸಹಕಾರ ನೀಡುವಂತೆ ಮನವಿ ಮಾಡಿದರು.
ಇದರ ಹಿನ್ನೆಲೆಯಲ್ಲಿ ಟಿಬೆಟಿಯನ್ ಸಂಘಟನೆಗಳು ಸೇರಿದಂತೆ ಅನೇಕರು ಸಹಾಯಹಸ್ತ ಚಾಚಿದ್ದು,ನಾಲ್ಕು ಸಾವಿರ ಲೀಟರ್ ಎಣ್ಣೆ,
ಜೈನ್ ಸಮಾಜದವರು ಸಕ್ಕರೆ ಅಕ್ಕಿ ಸೇರಿದಂತೆ ಸಾರ್ವಜನಿಕರು ವಿವಿಧ ಆಹಾರ ಪದಾರ್ಥಗಳನ್ನು ನೀಡಿದ್ದರು.ಆದರೆ ಶಾಸಕರು ತಮ್ಮ ಬೆಂಬಲಿಗರ ಮೂಲಕ ತಮಗೆ ಬೇಕಾದವರಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು
ಇದಲ್ಲದೆ, ವಿತರಣೆ ಕಿಟ್‌ನಲ್ಲಿ ಶಾಸಕರು ವೈಯಕ್ತಿಕವಾಗಿ ನೀಡುತ್ತಿರುವಾಗ ನಮೂದಿಸಿ ಅವರ ಫೋಟೋ ಹಾಕಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬೆಮ್ಮತ್ತಿ ಕೃಷ್ಣ,ಲೋಕಪಾಲಯ ವೀರಭದ್ರ, ಚಂದ್ರು ,ಹಾಜರಿದ್ದರು

ಮಾಗಳಿ ರಾಮೇಗೌಡ ಎಕ್ಸ್ ಪ್ರೆಸ್ ಟಿವಿ ಪಿರಿಯಾಪಟ್ಟಣ(ಮೈಸೂರು)

Please follow and like us:

Related posts

Leave a Comment