ತುಮಕೂರಿನ ಪಿಎಚ್ ಕಾಲೋನಿ ಕಂಟೋನ್ಮೆ0ಟ್ ಜೋನ್

ತುಮಕೂರು: ಗುಜರಾತ್ ಮೂಲದ ವ್ಯಕ್ತಿ ಇದ್ದಂತಹ ಪ್ರದೇಶ ಪಿಎಚ್ ಕಾಲೋನಿಯನ್ನು ಕಂಟೋನ್ಮೆ0ಟ್ ಜೋನ್ ಎಂದು ಪರಿಗಣಿಸಲಾಗಿದೆ. ೪೫೨ ಮನೆಗಳು ೧೯೦೦ ಕ್ಕಿಂತ ಹೆಚ್ಚು ಜನರು ವಾಸವಿದ್ದಾರೆ. ಇವರಿಗೆ ನೀಡಬೇಕಾದ ಅಗತ್ಯ ವಸ್ತುಗಳನ್ನು ಹೊರಗಿನಿಂದಲೇ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ತಿಳಿಸಿದ್ದಾರೆ
ಜಿಲ್ಲೆಯಲ್ಲಿ ಮೂರು ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿದ್ದು,ಅದರಲ್ಲಿ ಮೊದಲ ವ್ಯಕ್ತಿ ಸಾವನ್ನಪ್ಪಿದ್ದಾರೆ,ಎರಡನೇ ವ್ಯಕ್ತಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ, ಮೂರನೇ ವ್ಯಕ್ತಿ ಗುಜರಾತ್ ಮೂಲದವರಾಗಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.ಈಗಾಗಲೇ ಸ್ಥಳೀಯ
೧೫ ಜನ ವಾಲೆಂಟಿಯರ್ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ.ಅಲ್ಲಿನ ಜನರೆಲ್ಲರೂ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ.ಇ0ತಹ ವೇಳೆಯಲ್ಲಿ ರಂಜಾನ್ ಆಚರಣೆ ಕೂಡ ಬಂದಿದ್ದು ತಾವೆಲ್ಲರೂ ಜಾಗರೂಕತೆಯಿಂದ ಆಚರಿಸಬೇಕು, ಧೈರ್ಯವಾಗಿ ಕೊರೊನಾ ವೈರಸ್ ಎದುರಿಸಬೇಕು ಎಂದು ತಿಳಿಸಿದರು.
ಕಂಟೋನ್ಮೆ0ಟ್ ಜೋನ್ ಅಲ್ಲದೆ ಅದರ ಸುತ್ತ ಇರುವ ಒಂದು ಕಿಲೋ ಮೀಟರ್ ಪ್ರದೇಶವನ್ನು ಇಂಟೆನ್ಸಿವ್ ಬಪರ್ಜೋನ್ ಎಂದು ಪರಿಗಣಿಸಲಾಗಿದೆ.ಈಗಾಗಲೇ ಈ ವ್ಯಾಪ್ತಿಯಲ್ಲಿರುವ ೮೬೦ಮನೆಗಳನ್ನು ಸರ್ವೆ ಮಾಡಲಾಗಿದೆ. ಕೊರೊನಾ ತಪಾಸಣೆ ಕೇವಲ ಕಂಟೋನ್ಮೆ0ಟ್ ಜೋನ್‌ಗೆ ಮಾತ್ರವಲ್ಲದೆ,ಬಪರ್ಜೋನ್ ವ್ಯಾಪ್ತಿಗೂ ಒಳಪಡುತ್ತದೆ ಎಂದರು.
ಈ ವ್ಯಕ್ತಿ ಮಳೂರುದಿಣ್ಣೆ ಹಾಗೂ ಮಂಡಿಪೇಟೆಯಲ್ಲಿ ಕೂಡ ಓಡಾಡಿರುವುದರಿಂದ ಇಲ್ಲಿ ಕೂಡ ಬಪರ್ಜೋನ್ ಮಾಡಲಾಗುತ್ತಿದೆ.ಇಲ್ಲಿ ಪ್ರತಿ ಮನೆಗಳಿಗೂ ತೆರಳಿ ಕೆಮ್ಮು, ನೆಗಡಿ, ಜ್ವರ, ಮತ್ತಿತರ ಸಮಸ್ಯೆಗಳು ಕಂಡುಬರುತ್ತಿವೆಯೇ ಎಂದು ಆಶಾ ಕಾರ್ಯಕರ್ತೆಯರು ಆರೋಗ್ಯ ಕಾರ್ಯಕರ್ತೆಯರು ವರದಿಯನ್ನು ಮಾಡಲಿದ್ದಾರೆ ಅವರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಕAಟೋನ್ಮೆ0ಟ್ ಜೋನ್‌ನಲ್ಲಿರುವ ಪ್ರದೇಶಗಳನ್ನು ಮೇ.೩ರವರೆಗೆ ಯಾವುದೇ ಕಾರಣಕ್ಕೂ ತೆರೆಯಲು ಅವಕಾಶವಿಲ್ಲ, ಉಳಿದ ಪ್ರದೇಶಗಳಲ್ಲಿ ಸರ್ಕಾರದ ಆದೇಶದನ್ವಯ ಕೆಲವು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment