ಪಾವಗಡ ತಾಲೂಕಿನಲ್ಲಿ ರಸ್ತೆ ಅಪಘಾತ, ಕಾರು ಚಾಲಕ ಸಾವು

ಪಾವಗಡ(ತುಮಕೂರು): ಚಾಲಕನ ನಿಯಂತ್ರಣ ತಪ್ಪಿದ ಕಾರು ಗುಂಡಿಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಾವಗಡ ತಾಲೂಕಿನಲ್ಲಿ ಇಂದು ಸಂಜೆ ನಡೆದಿದೆ.
ದೇವರ ಹಟ್ಟಿ ಗ್ರಾಮದ ಉಮೇಶ್(೨೮) ಮೃತಪಟ್ಟ ಚಾಲಕ.ಕೆಲವರು ಕಾರಿನಲ್ಲಿ ತಮ್ಮ ಗ್ರಾಮದಿಂದ ಕರಿಯಮ್ಮನ ಪಾಳ್ಯ ಗ್ರಾಮಕ್ಕೆ ಬಂದಿದ್ದರು.ಬಳಿಕ ಅಲ್ಲಿಂದ ಕೋಟಗುಡ್ಡ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಗುಂಡಿಗೆ ಬಿದ್ದಿದೆ.
ಹೀಗಾಗಿ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾದರೇ ಚಾಲಕ ಸ್ಥಳದಲ್ಲೇ ಸಾವು ಕಂಡಿದ್ದಾನೆ.
ಇನ್ನು ಘಟನೆಯಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅರಸೀಕೆರೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment