ಪಾವಗಡ ಪಟ್ಟಣದಲ್ಲೂ ನೋ ಮಾಸ್ಕ್, ನೋ ಸೋಷಿಯಲ್ ಡಿಸ್ಟೆಂಸ್..

ಪಾವಗಡ(ತುಮಕೂರು):ಪಾವಗಡ ತಾಲೂಕಿನಲ್ಲಿ ಯಾವುದೇ ಕೊರೊನಾ ಕೇಸ್ ಇಲ್ಲದಿದ್ದರೂ ಈ ಭಾಗದ ಜನರ ದಿನನಿತ್ಯ ಭಯದ ವಾತವರಣದಲ್ಲಿ ಕಳೆಯುವಂತಾಗಿದೆ.
ಸದ್ಯ ಪಾವಗಡ ತಾಲೂಕು ಗಡಿ ಭಾಗವಾದ ಕಾರಣ ವ್ಯಾಪಾರಕ್ಕಾಗಿ ಅತಿಹೆಚ್ಚು ಮಂದಿ ಆಂಧ್ರದಿAದ ಬರುವುದು ಸಾಮಾನ್ಯವಾಗಿದೆ. ಆದರೆ ಅದೇ ಆಂಧ್ರದ ಹಿಂದುಪುರ, ಅನಂತಪುರ ಸೇರಿ ಅನೇಕ ಪ್ರದೇಶಗಳು ರೆಡ್ ಜೋನ್ ಆಗಿರುವುದರಿಂದ ಅಲ್ಲಿಂದ ಜನರು ಬಂದು ಇಲ್ಲಿ ಸೋಂಕು ಹರಡಿಸಬಹುದು ಎಂಬ ಭಯದಲ್ಲಿ ಪಾವಗಡ ಮಂದಿ ದಿನದೂಡುವಂತಾಗಿದೆ.
ಈಗಾಗಲೇ ಪಾವಗಡ ಪಟ್ಟಣದಲ್ಲಿ ಬ್ಯಾಂಕುಗಳಲ್ಲಿ ಅಂಗಡಿ ಮಳಿಗೆಗಳಲ್ಲಿ ನೋ ಮಾಸ್ಕ್, ನೋ ಸೋಷಿಯಲ್ ಇಲ್ಲದಿರುವುದು ಕಂಡು ಬರುತ್ತಿದೆ.ಹೀಗಾಗಿ ಈ ಭಾಗದಲ್ಲಿ ಸಡಲಿಕೆ ನೀಡಿದರೆ ಮುಂದೆ ದೊಡ್ಡ ಅನಾಹುತಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಇಲ್ಲಿನ ನಾಗರೀಕರ ಅಭಿಪ್ರಾಯವಾಗಿದೆ,
ಇನ್ನು ತಾಲ್ಲೂಕಿನ ಗ್ರಾಮೀಣ ಪ್ರದೇಶದಗಳಿಗೆ ಬಸ್ ಸಂಚಾರ ಇಲ್ಲದಿದ್ದರೂ ಗ್ರಾಮೀಣ ಭಾಗದಿಂದ ನೂರಾರು ಮಂದಿ ಬ್ಯಾಂಕಿನ ವಹಿವಾಟುಗಳಿಗೆ ಆಗಮಿಸುತ್ತಿದ್ದಾರೆ.ಜೊತೆಗೆ ಅಂಚೆ ಕಚೇರಿಯಲ್ಲಿ ಜನರು ತುಂಬು ತುಳುಕುತ್ತಿದ್ದಾರೆ.
ಆದರೆ ಇದನೆಲ್ಲಾ ಗಮನಿಸಿ ಜನರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕಾದ ತಾಲೂಕು ಆಡಳಿತ ನಿದ್ದೆಗೆ ಜಾರಿದೆ.

ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ(ತುಮಕೂರು)

Please follow and like us:

Related posts

Leave a Comment