ಶಿರಾದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆಯಾ..?

ಶಿರಾ(ತುಮಕೂರು): ರೈತರು ತಮ್ಮ ಖಾತೆಗೆಳಿಗೆ ಜಮಾ ಆಗಿರುವ ಹಣವನ್ನು ಹಿಂಪಡೆಯುವ ಸಲುವಾಗಿ ಡಿಸಿಸಿ ಬ್ಯಾಂಕಿನ ಮುಂದೆ ಸಾಮಾಜಿಕ ಅಂತರವನ್ನು ಕಾಪಾಡದೆ ಜಮಾಯಿಸಿದ್ದು,ಕೊರೊನಾದ ಬಗ್ಗೆ ಎಚ್ಚರಿಕೆ ವಹಿಸದಿರುವುದು ಕಂಡು ಬಂದಿದೆ.
ಅAದ ಹಾಗೇ ಕೇಂದ್ರ ಸರ್ಕಾರವು ಫಸಲ್ ಭೀಮಾ ಇನ್ಸೂರೆನ್ಸ್ ಹಣ,ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರತಿ ರೈತನಿಗೆ ೨೦೦೦ರೂ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ೭೬೯ ರೂ. ಹಾಗೂ ಜನಧನ್ ಖಾತೆ ಹೊಂದಿರುವ ಹೆಣ್ಣುಮಕ್ಕಳಿಗೆ ೫೦೦ರೂ.ಗಳನ್ನು ಅವರವರ ಖಾತೆಗಳಿಗೆ ಜಮಾ ಮಾಡಿದೆ.
ಹೀಗಾಗಿ ಈ ಹಣ ಬಿಡಿಸಿಕೊಳ್ಳಲು ನಿನ್ನೆ ಹಾಗೂ ಇಂದು ನಗರದ ಡಿಸಿಸಿ ಬ್ಯಾಂಕಿನ ಮುಂದೆ ರೈತರು ಸಾಲು ಸಾಲಾಗಿ ಜಮಾಯಿಸಿದ್ರು. ಆದರೆ ಕೊರೊನಾ ಸೋಂಕು ಹರಡುವಿಕೆ ಬಗ್ಗೆ ಎಚ್ಚರದಿಂದ ಇರಬೇಕಾದ ಇವರು ಅದನ್ನು ಲೆಕ್ಕಿಸದೇ ಸಾಮಾಜಿಕ ಅಂತರವನ್ನು ಕಾಪಾಡಬೇಕು ಎಂಬ ನಿಯಮವನ್ನು ಗಾಳಿಗೆ ತೂರಿ ಜಮಾಯಿಸಿದ್ದು ಮಾತ್ರ ವಿಪರ್ಯಾಸ.
ಇದಲ್ಲದೆ, ಇದನೆಲ್ಲಾ ಗಮನಿಸಿದಾಗ ನಗರದಲ್ಲಿ ಲಾಕ್ ಡೌನ್ ಎಲ್ಲಿದೆಯೆಂಬುದನ್ನು ಪ್ರಶ್ನಿಸುವಂತಾಗಿದ್ದು,ಪೆಟ್ರೋಲ್ ಸಮಸ್ಯೆ ಇದ್ದರೂ ಸಹ ಅಷ್ಟೊಂದು ದ್ವಿಚಕ್ರ ವಾಹನಗಳು ರಸ್ತೆಗೆ ಇಳಿದಿದ್ದು ಹೇಗೆ ಎಂಬ ಅನುಮಾನ ಎದ್ದಿದೆ.
ಇನ್ನು ಸಾಕಷ್ಟು ಮಂದಿ ಮಾಸ್ಕ್ ಧರಿಸದೇ ಸರತಿ ಸಾಲಿನಲ್ಲಿ ನಿಂತಿರುವುದು ಕೂಡ ಕಂಡು ಬಂದಿದ್ದು,ಒಟ್ಟಾರೆ ಇಡೀ ತುಮಕೂರು ಜಿಲ್ಲೆಯಲ್ಲಿ ನೋ ಮಾಸ್ಕ್, ನೋ ಸೋಷಿಯಲ್ ಡಿಸ್ಟೆಂಸ್ ಎಂಬುದು ಮತ್ತೆ ಮತ್ತೆ ಸಾಭೀತಾಗುತ್ತಿದೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment