ಆರೋಗ್ಯ / HEALTH

ದೇವದುರ್ಗದಲ್ಲಿ ಮಕ್ಕಳಿಗೆ ಕೊಡುವ ಆಹಾರದಲ್ಲೂ ಗೋಲ್‌ಮಾಲ್?

Published

on

ದೇವದುರ್ಗ(ರಾಯಚೂರು):ಮಹಿಳೆಯರು ಮತ್ತು ಮಕ್ಕಳಿಗೆ ಸರಿಯಾಗಿ ಆಹಾರ ಧಾನ್ಯಗಳು ವಿತರಿಸಿದೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಹಿಳೆಯರು ಮುತ್ತಿಗೆ ಹಾಕಿರುವ ಘಟನೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಪಶು ಆಸ್ಪತ್ರೆ ಪಕ್ಕದಲ್ಲಿ ಇರುವ ಅಂಗನವಾಡಿ ಕೇಂದ್ರ ಸಂಖ್ಯೆ ೪ ರಲ್ಲಿ ನಡೆದಿದೆ.
ಇಂದು ಗರ್ಭಿಣಿ ಮಹಿಳೆಯರ ಅಕ್ಕಿ,ಬೆಳೆ,ಬೆಲ್ಲ ಸೇರಿದಂತೆ ಇತರೆ ವಸ್ತುಗಳನ್ನು ನೀಡುವ ಸಂದರ್ಭದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೀಡುತ್ತೀರಾ ಸರ್ಕಾರದಿಂದ ಬರುವ ಎಲ್ಲಾ ಪದಾರ್ಥಗಳು ಜನಗಳಿಗೆ ವಿತರಿಸದೇ ಎಲ್ಲಿ ಹೋದವು ಎಂದು ಮಹಿಳೆಯರು ಪ್ರಶ್ನಿಸಿದರು.
ಜೊತೆಗೆ ಸುಮಾರು ೫೦ ರಿಂದ ೬೦ ಜನ ಮಹಿಳೆಯರು ಶಿಕ್ಷಕಿ ಬೇಗಮ್‌ಗೆ ತರಾಟೆಗೆ ತೆಗೆದುಕೊಂಡ ಘಟನೆ ಕೂಡ ಜರುಗಿದೆ.ಅಲ್ಲದೆ, ಶಿಕ್ಷಕಿಯನ್ನು ಅಂಗನವಾಡಿ ಕೇಂದ್ರದಲ್ಲಿ ದಿಗ್ಗಬಂಧನ ಮಾಡಲಾಗಿತ್ತು.
ಇನ್ನು ವಿಷಯ ತಿಳಿದ ತಕ್ಷಣ ಗ್ರಾ.ಪಂ ಅಧ್ಯಕ್ಷ ರಂಗಯ್ಯ ಮುರಾಳ, ಪಿಡಿಓ ಪತ್ಯಪ್ಪ ರಾಠೋಡ್ ಮತ್ತು ಗ್ರಾ.ಪಂ ಸದಸ್ಯ ರಮೇಶ್ ಅನ್ವರಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸಂಬAಧಪಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಸರಿ ಪಡಿಸುವ ಭರವಸೆ ನೀಡಿದರು.ಬಳಿಕ ಮಹಿಳೆಯರು ಪ್ರತಿಭಟನೆ ಕೈ ಬಿಟ್ಟು ವಾಪಸ್ ತೆರಳಿದರು.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Click to comment

Trending

Exit mobile version