ಭತ್ತದ ಬೆಳೆ ನಷ್ಟ, ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರ

ಸಿರಿವಾರ(ರಾಯಚೂರು): ಸಿರಿವಾರ ತಾಲೂಕಿನಲ್ಲಿ ಗಾಳಿ ಮಳೆಗೆ ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಬೆಳೆ ನಷ್ಟವಾಗಿದ್ದು ಅಧಿಕಾರಿಗಳು ನೀಡುವ ವರದಿಯಂತೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.
ತಾಲೂಕಿನ ಜಾಲಾಪೂರು ಕ್ಯಾಂಪಿನಲ್ಲಿ ಮಳೆ ಗಾಳಿಗೆ ನೆಲಕ್ಕಚ್ಚಿದ ಭತ್ತದ ಗದ್ದೆಗಳನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಯಚೂರು ಜಿಲ್ಲೆಯಲ್ಲಿ ಮಳೆ ಗಾಳಿಯಿಂದ ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ.ಎಲ್ಲಾ ವರದಿಗಳನ್ನು ತರಿಸಿಕೊಂಡು ಸಿಎಂ ಜೊತೆ ಚರ್ಚಿಸಿ ರೈತರಿಗೆ ಸೂಕ್ತ ಪರಿಹಾರ ನೀಡಿಸುವ ಭರವಸೆ ನೀಡಿದರು.
ಕೊರೊನಾ ಕೇಸ್ ಎಲ್ಲಿ ಹೆಚ್ಚು ಪ್ರಕರಣಗಳು ಇದ್ದವು,ಅಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಎರಡನೇ ಹಂತದಲ್ಲಿ ರಾಯಚೂರು ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ ಪ್ರಾರಂಭ ಮಾಡುವುದಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಕೊರೊನಾ ಕೇಸ್‌ಗಳ ಕುರಿತು ಡಿಸಿ ಜೊತೆ ಸಮಾಲೋಚನ ಸಭೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದ ರಾಜಾಅಮರೇಶ್ವರ ನಾಯಕ, ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಕೆ.ಶಿವನಗೌಡ, ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ಗಂಗಾಧರನಾಯಕ,ಬಸವಗೌಡಬ್ಯಾಗವಾಟ್,ಮುಖAಡರದ ಜೆ.ಶರಣಪ್ಪಗೌಡ, ಜಿ.ಲೋಕರೆಡ್ಡಿ ಜೆ.ದೇವರಾಜಗೌಡ, ಜಿಲ್ಲಾಧಿಕಾರಿ ವೆಂಕಟೇಶ,ಸಿರವಾರ ತಹಶೀಲ್ದಾರ್ ಕೆ.ಶ್ರುತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರಿವಾರ(ರಾಯಚೂರು)

Please follow and like us:

Related posts

Leave a Comment