ಪೋಷಕರ ಜೇಬಿಗೆ ಕತ್ತರಿ ಹಾಕಲು ಮುಂದಾದ ಖಾಸಗಿ ಶಾಲೆಗಳು..

ಹುಬ್ಬಳ್ಳಿ:ಲಾಕ್ ಡೌನ್ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ಪೋಷಕರಿಗೆ ಈಗ ಮತ್ತೊಂದು ಆಘಾತ ಕಾದಿದೆ. ಲಾಕ್ ಡೌನ್‌ನಿಂದ ಜೀವನ ನಡೆಸುವದೇ ಕಷ್ಟವಾಗಿರುವಾಗ ಖಾಸಗಿ ಶಾಲೆಗಳು ಪೋಷಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿವೆ.
ಹೌದು,ಸರ್ಕಾರದ ಆದೇಶ ದಿಕ್ಕಿರಿಸಿದ ಕೆಲ ಖಾಸಗಿ ಶಾಲೆಗಳು ಪೋಷಕರಿಂದ ಶಾಲಾ ಶುಲ್ಕ ಭರಿಸುವಂತೆ ಮಾಹಿತಿ ರವಾನಿಸಿವೆ.
ಹೀಗಾಗಲೇ ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗಿರುವ ಪೋಷಕರಿಗೆ ಜೀವನ ಸಾಗಿಸಲು ದುಸ್ತರವಾಗಿರುವಾಗ, ಈಗ ಖಾಸಗಿ ಶಾಲೆಗಳು ಶುಲ್ಕ ಭರಿಸುವಂತೆ ಪೋಷಕರಿಗೆ ಒತ್ತಡ ಹಾಕುತ್ತಿವೆ.
ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಇನ್ನು ದಿನಾಂಕ ನಿಗದಿಯಾಗಿಲ್ಲ. ಶೈಕ್ಷಣಿಕ ವರ್ಷ ಯಾವಾಗ ಆರಂಭಿಸಬೇಕು ಎಂಬ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ಇನ್ನು ನಡೆಯುತಿಲ್ಲ. ಈಗ ಪೋಷಕರಿಗೆ ಖಾಸಗಿ ಶಾಲೆಗಳು ಶಾಕ್ ನೀಡಿದ್ದು ಪೋಷಕರನ್ನು ಚಿಂತಗೀಡು ಮಾಡಿದ್ದು, ಸಂಬAಧಪಟ್ಟ ಅಧಿಕಾರಿಗಳು ಈತ ಗಮನಹರಿಸಿ ಪೋಷಕರಿಗೆ ರಿಲೀಫ್ ಕೊಡಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment