ರಾಜಸ್ಥಾನದ ಕೋಟಾದಲ್ಲಿ ರಾಜ್ಯದ ವಿದ್ಯಾರ್ಥಿಗಳ ಪರದಾಟ..

ಹುಬ್ಬಳ್ಳಿ:ಲಾಕ್ ಡೌನ್ ಆದ ಹಿನ್ನಲೆಯಲ್ಲಿ ರಾಜಸ್ಥಾನದ ಕೋಟಾದಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಳು ತವರು ರಾಜ್ಯಕ್ಕೆ ಕರೆಸಿಕೊಳ್ಳಲು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ..
ಐಐಟಿ, ನೀಟ್ ತರಬೇತಿಗಾಗಿ ಹೊರ ರಾಜ್ಯಕ್ಕೆ ತೆರಳಿದ್ದ ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜಸ್ಥಾನದಲ್ಲಿ ಲಾಕ್ ಆದ ಹಿನ್ನಲೆಯಲ್ಲಿ, ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದಂತೆ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ.
ಆ ೩೦೦ ವಿದ್ಯಾರ್ಥಿಗಳಲ್ಲಿ ಧಾರವಾಡದ ಸ್ನೇಹಾ ಎಂಬ ವಿದ್ಯಾರ್ಥಿ ಕೋಟಾದಲ್ಲಿ ಲಾಕ್ ಆಗಿದ್ದಾಳೆ.ಈ ಎಲ್ಲ ವಿದ್ಯಾರ್ಥಿಗಳು ತಮ್ಮೂರಿಗೆ ಕರೆಸಿಕೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೊರೆ ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಕೋಟಾದಲ್ಲಿ ೧೦೦ ಕ್ಕು ಹೆಚ್ಚು ಪ್ರಕರಣಗಳು ಧೃಡಪಟ್ಟ ಹಿನ್ನೆಲೆ ಕೋಟಾ ಸಂಪೂರ್ಣ ಸೀಲ್ ಡೌನ್ ಆಗಿದೆ.ಇದರಿಂದ ನಿತ್ಯ ದೊರೆಯುತ್ತಿದ್ದ ಸೌಲಭ್ಯಗಳು ಕೂಡ ಸ್ಥಗಿತಗೊಂಡಿವೆ. ಪರಿಸ್ಥಿತಿ ಅರಿತ ಕೆಲ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನ ರಸ್ತೆ ಸಾರಿಗೆ ಮೂಲಕ ತಮ್ಮ ಊರಿಗೆ ವಾಪಸ್ ಕರೆಸಿಕೊಂಡಿದ್ದಾರೆ. ಆದರೆ ಕರ್ನಾಟಕದ ವಿದ್ಯಾರ್ಥಿಗಳು ಮಾತ್ರ ಅತಂತ್ರವಾಗಿದ್ದಾರೆ. ಜೊತೆಗೆ ವಿವಿಧ ಹಾಸ್ಟೆಲ್ ಹಾಗೂ ಪಿಜಿಗಳಲ್ಲಿ ತಂಗಿರುವ ೩೦೦ ವಿದ್ಯಾರ್ಥಿಗಳು ಆಂತಕದಲ್ಲಿದ್ದಾರೆ.
ಇನ್ನು ರಾಜ್ಯದ ಸಿಎಂ ಯಡಿಯೂರಪ್ಪಗೆ ಮನವಿ ಮಾಡಿಕೊಂಡಿರುವ ವಿದ್ಯಾರ್ಥಿಗಳು ಪರರಾಜ್ಯದಲ್ಲಿ ಪರದಾಡುತ್ತಿರುವ ತಮ್ಮನ್ನು ರಾಜ್ಯಕ್ಕೆ ಕರೆಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment