ಮನೆ ಆಕಸ್ಮಿಕ ಬೆಂಕಿ,ಮಾಲೀಕನಿಗೆ ಮನೆ ಮಂಜೂರಿನ ಭರವಸೆ..

ಆಳಂದ(ಕಲಬುರಗಿ): ಆಳಂದ ತಾಲೂಕಿನ ಮದಗುಣಕಿ ಗ್ರಾಮದ ನಿವಾಸಿ ಹಣಮಂತ ಸಣಮನಿ ಅವರ ಮನೆ ಆಕಸ್ಮಿಕ ಬೆಂಕಿಗೆ ಸಂಪೂರ್ಣ ಸುಟ್ಟು ಹೋಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಇದರ ಹಿನ್ನೆಲೆಯಲ್ಲಿ ಹಣಮಂತ ಸಣಮನಿ ನೆರವಿಗೆ ಧಾವಿಸಿರುವ ಶಾಸಕ ಸುಭಾಷ್ ಆರ್.ಗುತ್ತೆದಾರ ಹಣ ಆಹಾರದ ಕಿಟ್ ನೀಡಿದ್ದಾರೆ.
ಅಂದ ಹಾಗೇ ಹಣಮಂತ ಸಣಮನಿ ನಿವಾಸಕ್ಕೆ ಆಗಮಿಸಿದ ಶಾಸಕ ಸುಭಾಷ್ ಆರ್.ಗುತ್ತೆದಾರ,೫ ಸಾವಿರ ಆರ್ಥಿಕ ಸಹಾಯ ಹಾಗೂ ದಿನಸಿ ನೀಡಿ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿ, ಹಣಮಂತ ಬಡ ವ್ಯಕ್ತಿಯಾಗಿದ್ದು,ಬೆಂಕಿಯಿAದ ಮನೆ ಸುಟ್ಟು ಹೋಗಿರುವ ಹಿನ್ನೆಲೆಯಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ಮಂಜೂರು ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಈ ವೇಳೆ ಜಿ.ಪಂ ಸದಸ್ಯ ಗುರುಶಾಂತ ಪಾಟೀಲ, ಪಿ.ಎಸ್.ಐ ಇಂದುಮತಿ, ಮುಖಂಡ ಶೇಖರ್ ಪಾಟೀಲ್,ಶಿವಲಿಂಗಪ್ಪ ಜಮಾದಾರ ಮಲ್ಲಿನಾಧ ಪರೇಣಿ ಹಾಜರಿದ್ದರು.

ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ(ಕಲಬುರಗಿ)

Please follow and like us:

Related posts

Leave a Comment