ಹೆಚ್‌ಎಎಲ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ಕೆ.ಆರ್.ಪುರ(ಬೆಂ.ನಗರ): ಹೆಚ್‌ಎಎಲ್ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ೯:೩೦ಕ್ಕೆ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ.
ಸದ್ಯ ಹಳೇ ಏರ್‌ಪೋರ್ಟ್ ರಸ್ತೆಯ ಹೆಚ್‌ಎಎಲ್‌ನ ಫೌಂಡ್ರಿ ಮತ್ತು ಫೋರ್ಜ್ ವಿಭಾಗದಲ್ಲಿ ಬೆಂಕಿಜ್ವಾಲೆ ಹರಡಿತೆನ್ನಲಾಗಿದ್ದು,ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಇನ್ನುಸ್ಕ್ರ‍್ಯಾಪ್ ಸೆಕ್ಷನ್‌ನಲ್ಲಿ ಬೆಂಕಿ ಹೊತ್ತುಕೊಂಡಿತ್ತು. ಹೆಚ್‌ಎಎಲ್‌ನ ಅಗ್ನಿಶಾಮಕ ಮತ್ತು ಭದ್ರತಾ ಸಿಬ್ಬಂದಿಯಿAದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯಿತು.
ಇದೇ ವೇಳೆ ಹೆಚ್‌ಎಎಲ್‌ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದ ದೃಶ್ಯ ಕಂಡು ಸುತ್ತಮುತ್ತಲ ಪ್ರದೇಶದ ಜನರು ಬೆಚ್ಚಿಬಿದ್ದಿದ್ದಾರೆ. ತಮಗೆ ನಾಲ್ಕೈದು ಸ್ಫೋಟಗಳ ಸದ್ದು ಕೇಳಿಸಿತು. ಆ ಬಳಿಕ ಹೆಚ್‌ಎಎಲ್‌ನಲ್ಲಿ ಅಗ್ನಿಜ್ವಾಲೆ ಬೃಹತ್ತಾಗಿ ಕಾಣಿಸಿತು. ಬೆಂಕಿಯು ದಟ್ಟ ಹೊಗೆಯ ಕಾರ್ಮೋಡವನ್ನೇ ಸೃಷ್ಟಿಸಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಕೆ.ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರ (ಬೆಂ.ನಗರ)

Please follow and like us:

Related posts

Leave a Comment