ಮಳವಳ್ಳಿಯಲ್ಲಿ ಪೊಲೀಸರಿಗೆ ಮಾಸ್ಕ್, ಸಾರ್ವಜನಿಕರಿಗೆ ಆಹಾರದ ಕಿಟ್ ವಿತರಣೆ

ಮಳವಳ್ಳಿ (ಮಂಡ್ಯ) : ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್‌ನಿAದ ಸಾವಿರಾರು ಮಂದಿಗೆ ಪಡಿತರ ಕಿಟ್ ಹಾಗೂ ಪೊಲೀಸ್ ಇಲಾಖೆಗೆ ಮಾಸ್ಕ್,ಸ್ಯಾನಿಟೈಸರ್ ವಿತರಣೆ ಕಾರ್ಯಕ್ರಮ ನಡೆಯಿತು.
ಮಳವಳ್ಳಿ ಉಪವಿಭಾಗದ ಡಿವೈಎಸ್‌ಪಿ ಪೃಥ್ವಿ ಅವರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸುವ ಮೂಲಕ ಮಾಜಿ ಸಚಿವ ಪಿ.ಎಂ.ನರೇAದ್ರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆ ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕರಾದ ರಮೇಶ ಬಂಡಿ ಸಿದ್ದೇಗೌಡ, ಕೆ.ಬಿ ಚಂದ್ರಶೇಖರ್, ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷ ಚಿದಾನಂದ, ತಾಲ್ಲೂಕು ಅಧ್ಯಕ್ಷ ನಾಗೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುಂದರೇಶ್, ಉಪಾಧ್ಯಕ್ಷ ಮಾಧು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಸುಂದರರಾಜ್ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.
ಇನ್ನೂ ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ,ಮಳವಳ್ಳಿ ಪಟ್ಟಣದ ಸುಮಾರು ೨ ಸಾವಿರ ಮಂದಿಗೆ ಪಡಿತರ ಕಿಟ್ ವಿತರಿಸಲಾಗುತ್ತಿದ್ದು,ಜೊತೆಗೆ ಸಿಲ್ ಡೌನ್ ಆಗಿರುವ ಪ್ರದೇಶದಲ್ಲಿರುವ ಮನೆ ಮನೆಗೂ ಅಲ್ಲಿನ ಅಶಾ ಕಾರ್ಯಕರ್ತರ ಮೂಲಕ ಕಿಟ್ ವಿತರಿಸಲಾಗುವುದು. ಅಲ್ಲದೆ, ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಕಡೆ ಕಡುಬಡವರಿಗೆ ಪಡಿತರ ಕಿಟ್ ವಿತರಿಸಲಾಗುತ್ತದೆ ಎಂದರು.
ಮಾಜಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಕೋವಿಡ್-೧೯ ನಿಯಂತ್ರಣ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ.
ಕಳಪೆ ಮಟ್ಟದ ಪಿಪಿಎಫ್ ಕಿಟ್‌ನ್ನು ಖರೀದಿ ಮಾಡಿದ್ದು,ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ (ಮಂಡ್ಯ)

Please follow and like us:

Related posts

Leave a Comment