ಕೊರೊನಾ ಸೋಂಕಿತ ಮೃತ ವ್ಯಕ್ತಿ ಪತ್ನಿಗೂ ಅಂಟಿದ ಸೋಂಕು..

ತುಮಕೂರು: ಜಿಲ್ಲೆಯಲ್ಲಿ ಐದನೇ ಕೊರೊನಾ ವೈರಸ್ ಪ್ರಕರಣ ಧೃಡಪಟ್ಟಿದೆ.
ಅಂದ ಹಾಗೇ ಈ ಬಗ್ಗೆ ಮಾಹಿತಿ ನೀಡಿರುವ ತುಮಕೂರು ಡಿಸಿ ಡಾ.ಕೆ.ರಾಕೇಶ್ ಕುಮಾರ್, ೬೫ ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಇತ್ತೀಚೆಗೆ ಏಪ್ರಿಲ್ ೨೬ರಂದು ಸೋಂಕಿನಿAದ ಮೃತಪಟ್ಟಿದ್ದ ರೋಗಿ ಸಂಖ್ಯೆ ೫೩೫ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ.
ಇನ್ನು ೬೫ ವರ್ಷದ ಈ ಮಹಿಳೆಯನ್ನು ರೋಗಿ ಸಂಖ್ಯೆ ೫೫೩ ಎಂದು ಗುರುತಿಸಲಾಗಿದೆ.ರೋಗಿ ಸಂಖ್ಯೆ ೫೩೫ ವ್ಯಕ್ತಿಯ ಪತ್ನಿಯಾಗಿರುವ ಸೋಂಕಿತ ಮಹಿಳೆಯನ್ನು ಈಗಾಗಲೇ ತುಮಕೂರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿ ಇರಿಸಲಾಗಿದೆ.
ಜೊತೆಗೆ ತುಮಕೂರು ನಗರದ ಕೆಎಚ್‌ಬಿ ಕಾಲೋನಿಯಲ್ಲಿ ವಾಸಿಸುತ್ತಿದ್ದ ಈಗಾಗಲೇ ಸೋಂಕಿನಿAದ ಮೃತಪಟ್ಟಿದ್ದ ವ್ಯಕ್ತಿಯ ಜೊತೆ ಮಹಿಳೆ ಇದ್ದರು. ಈಗಾಗಲೇ ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರಾದ ನಾಲ್ವರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ ಎಂದರು.

ಶ್ರೀಮAತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment