ಯುವಕನ ಮೆರವಣಿಗೆ ಪ್ರಕರಣ: 15 ಮಂದಿ ವಿರುದ್ಧ ಕೇಸ್

ಹುಬ್ಬಳ್ಳಿ: ಕ್ವಾರಂಟೈನ್ ಮುಗಿಸಿ ಮನೆಗೆ ಬಂದ ವ್ಯಕ್ತಿಯ ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ೧೫ ಜನರ ವಿರುದ್ದ ಪ್ರಕರಣ ದಾಖಲಾಗಿದೆ.
ಸೀಲ್‌ಡೌನ್ ಮಾಡಿರುವ ಮುಲ್ಲಾ ಓಣಿಯಲ್ಲಿ ಸ್ಥಳೀಯರು ಗುಂಪುಗೂಡಿ ವ್ಯಕ್ತಿಯನ್ನು ಸ್ವಾಗತಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ ಬೆನ್ನಲ್ಲೇ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಧಾರವಾಡ ಜಿಲ್ಲೆಯಲ್ಲಿ ಕೋವಿಡ್–೧೯ ಪ್ರಕರಣ ಹೆಚ್ಚು ವರದಿಯಾಗಿರುವ ಹಳೇ ಹುಬ್ಬಳ್ಳಿ ಅತಿ ಸೂಕ್ಷ್ಮ ಪ್ರದೇಶವಾಗಿದೆ.
ಹಾಗಾಗಿ, ಇಲ್ಲಿ ಸೀಲ್‌ಡೌನ್ ಜಾರಿಯಲ್ಲಿದೆ.ಆದರೂ,ನಿಯಮ ಮೀರಿ ವ್ಯಕ್ತಿಯ ಸ್ವಾಗತಕ್ಕೆ ಜನ ಸೇರಿದ್ದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಅಲ್ಲದೆ, ಕೋವಿಡ್-೧೯ನಿಂದ ಚೇತರಿಸಿಕೊಂಡು ಬಿಡುಗಡೆಯಾದ ಪಿ-೧೯೪ ವ್ಯಕ್ತಿಗೆ ಸ್ವಾಗತ ಮಾಡಲಾಗಿದೆ ಎನ್ನುವ ವದಂತಿ ಕೂಡ ಹರಿದಾಡುತ್ತಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ದೀಪಾ ಚೋಳನ್, ವಿಡಿಯೊ ವೈರಲ್ ಆಗಿರುವ ವಿಷಯ ನನ್ನ ಗಮನಕ್ಕೂ ಬಂದಿದೆ. ಆದರೆ, ವಿಡಿಯೋದಲ್ಲಿರುವ ವ್ಯಕ್ತಿ ಪಿ-೧೯೪ ಅಲ್ಲ, ಯುವಕ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದಾನೆ.ಸೀಲ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment