ಆಶಾ ಕಾರ್ಯಕರ್ತೆರಿಗೆ ದಿನಸಿ-ತರಕಾರಿ ಕಿಟ್ ವಿತರಣೆ

ಹರಪನಹಳ್ಳಿ(ಬಳ್ಳಾರಿ):ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಎಂ.ಪಿ.ವೀಣಾ ಮಹಾಂತೇಶ್‌ರ ಜನಸಂಪರ್ಕ ಕಚೇರಿಯಲ್ಲಿ ಆಶಾ ಕಾರ್ಯಕರ್ತೆಯರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು.
ಅಂದ ಹಾಗೇ ತಮ್ಮ ಕಚೇರಿಯಲ್ಲಿ ಆಶಾ ಕಾರ್ಯಕರ್ತೆಯರ ಜೊತೆ ಸಂವಾದ ನಡೆಸಿ ಅವರ ಕೆಲಸ ಕಾರ್ಯಗಳ ಬಗ್ಗೆ ದ ಎಂ.ಪಿ.ವೀಣಾ ಮಹಾಂತೇಶ್ ಶ್ಲಾಘನೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ದಿನಸಿ ಹಾಗೂ ತರಕಾರಿ ಕಿಟ್‌ಗಳನ್ನು ಆಶಾ ಕಾರ್ಯಕರ್ತರಿಗೆ ಎಂಪಿ ವೀಣಾ ಮಹಾಂತೇಶ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಚಿಗಟೇರಿ ಗಾಯತ್ರಿ ದೇವಿ,ದಾದಾಪೀರ್,ಮನೋಜ್ ಕುಮಾರ್,ಆಶ್ರಫ್ ಅಲ್ಲಿ, ಪಿ.ಕೊಟ್ರೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.

ಮೇಹಬೂಬ್ ಸಾಬ್ ಎಕ್ಸ್ ಪ್ರೆಸ್ ಟಿವಿ ಹರಪನಹಳ್ಳಿ(ಬಳ್ಳಾರಿ)

Please follow and like us:

Related posts

Leave a Comment