ಆರೋಗ್ಯ / HEALTH

ಕೊರೊನಾ ಸೋಂಕು ದೃಢಪಟ್ಟ ಪಿ-589 ವ್ಯಕ್ತಿಯ ಪ್ರಯಾಣದ ಮಾಹಿತಿ

Published

on

ಧಾರವಾಡ:ಜಿಲ್ಲೆಯಲ್ಲಿ ನಿನ್ನೆ(ಮೇ೦೧)ಕೋವಿಡ್-೧೯ ಕೊರೊನಾ ಸೋಂಕು ದೃಢ ಪಟ್ಟ ಪಿ- ೫೮೯ ಸೋಂಕಿತ ವ್ಯಕ್ತಿಯು ಹುಬ್ಬಳ್ಳಿ ಶಹರದ ಕೇಶ್ವಾಪೂರ ನಿವಾಸಿಯಾಗಿದ್ದಾರೆ.
ಇವರು ಮಾ.೨೭ರಂದು ತಮ್ಮ ಮಗನ ಜೊತೆಯಲ್ಲಿ ಹುಬ್ಬಳ್ಳಿಯ ತುಳಜಾಭವಾನಿ ದೇವಸ್ಥಾನದಲ್ಲಿ ಹಾಗೂ ನಂತರದ ದಿನಗಳಲ್ಲಿ ತೊರವಿ ಹಕ್ಕಲ,ಆನಂದನಗರ,ಅರವಿAದನಗರ,ಹಳೇ ಹುಬ್ಬಳ್ಳಿ,ಟಿಪ್ಪುನಗರ,ನೇಕಾರನಗರ ಮತ್ತು ಕೇಶ್ವಾಪೂರದಲ್ಲಿ ಸಾರ್ವಜನಿಕರಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದಾರೆ.
ಲಾಕ್ ಡೌನ್ ಘೋಷಣೆಯಾದ ನಂತರ ಸದರಿಯವರು ಹುಬ್ಬಳ್ಳಿಯ ಕಮರಿಪೇಟೆಯಲ್ಲಿರುವ ಮಟನ್ ಶಾಪ್ ಗಳಿಗೆ ಭೇಟಿ ನೀಡಿರುತ್ತಾರೆ ಮತ್ತು ಏಪ್ರಿಲ್ ತಿಂಗಳಲ್ಲಿ ಹುಬ್ಬಳ್ಳಿಯ ಶಾಂತಿನಗರ,ಬೆAಗೇರಿ,ಮಹಾವೀರಗಲ್ಲಿ,ಬೆಳಗಾAವಗಲ್ಲಿ,ಮರಾಠಾಗಲ್ಲಿ, ಶಕ್ತಿನಗರ, ವಿಕಾಸನಗರ, ಗೋಕುಲ ರಸ್ತೆ, ಜನತಾಬಜಾರ, ಸುರಭಿನಗರ, ಹೊಸೂರ,ಸ್ಟೇಷನ್ ರಸ್ತೆ ತಬೀಬ್ ಲ್ಯಾಂಡ್,ಕಲ್ಯಾಣಗರ,ವೆAಕಟೇಶ ಕಾಲೋನಿ, ದೇಪಾಂಡೆನಗರ ದಾಜಿಬಾನಪೇಟ,ಸಿಬಿಟಿ,ರೇಲ್ವೆವರ್ಕ್ ಶಾಪ್,ಗಣೇಶಪೇಟ,ಗೂಡ್ಸ್ ಶೆಡ್ ರೋಡ,ತಾಡಪತ್ರಿಗಲ್ಲಿ , ಚೇತನಾಕಾಲೋನಿ, ಬೂಸಪೇಟ ಹಾಗೂ ಹುಬ್ಬಳ್ಳಿಯ ಇನ್ನಿತರ ಸ್ಥಳಗಳಲ್ಲಿ ಸಂಚರಿಸಿದ್ದಾರೆ.
ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಇವರನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದ್ದು,ಕೂಡಲೇ ಜಿಲ್ಲಾಡಳಿತದ ಸಹಾಯವಾಣಿಗೆ ೧೦೭೭ ಗೆ ಕರೆ ಮಾಡಿ ಮಾಹಿತಿ ನೀಡಬೇಕು ಹಾಗೂ ಸಮೀಪದ ಸರ್ಕಾರ ಆಸ್ಪತ್ರೆ ಭೇಟಿ ನೀಡಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಧಾರವಾಡ

Click to comment

Trending

Exit mobile version