ಹೊಲದಲ್ಲಿ ಮೇವು ತಿಂದು ಉಸಿರುಗಟ್ಟಿ 20 ಕುರಿಗಳು ಸಾವು

ಶಿರಾ(ತುಮಕೂರು):ವಿಷಪೂರಿತ ಮೇವು ಸೇವಿಸಿ ೨೦ ಕುರಿಗಳು ಧಾರುಣವಾಗಿ ಸಾವು ಕಂಡ ಘಟನೆ ಶಿರಾ ತಾಲ್ಲೂಕಿನ ಸೋರೆಕಂಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುರಿಗಾಹಿ ಕಾವಲಪ್ಪ ಎಂಬುವರಿಗೆ ಸೇರಿದ ಕುರಿಗಳೇ ಸಾವು ಕಂಡಿದ್ದು,ಇAದು ಸಂಜೆ ಹೊಲದಲ್ಲಿ ೬೦-೭೦ ಕುರಿಗಳನ್ನು ಮೇಯಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಇನ್ನು ವಿಷಪೂರಿತ ಮೇವು ತಿಂದ ಕುರಿಗಳು ಹೊಟ್ಟೆಯುಬ್ಬಿಸಿಕೊಂಡು ಒದ್ದಾಡಿವೆ.ಬಳಿಕ ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿದ ವೇಳೆ ಕುರಿಗಳು ಸಾವು ಕಂಡಿರುವ ವಿಷಯ ಗೊತ್ತಾಗಿದೆ.
ಇದೇ ವೇಳೆ ಕುರಿ ಸಾವಿನ ವಿಚಾರವಾಗಿ ತಹಸೀಲ್ದಾರ್ ನಾಹಿದಾ ಜಮ್ ಜಮ್ ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರ ವರದಿ ನೀಡುವಂತೆ ತಿಳಿಸಿದ್ದಾರೆ
ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment