ಕೂಲಿ ಕಾರ್ಮಿಕರಿಗೆ 50 ಟನ್ ತರಕಾರಿ ವಿತರಣೆ..

ಕೆಆರ್‌ಪುರ(ಬೆಂ.ನಗರ):ಲಾಕ್ ಡೌನ್ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ನೆರವಾಗುವಲ್ಲಿ ಕ್ಷೇತ್ರದ ಮುಖಂಡರ ಹಾಗೂ ಕಾರ್ಯಕರ್ತರ ಕಾರ್ಯ ಶಾಘ್ಲನೀಯವೆಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹೇಳಿದ್ದಾರೆ.
ಕ್ಷೇತ್ರದ ದೇವಸಂದ್ರ ವಾರ್ಡನ ಬಿಜೆಪಿಯ ಯುವ ಮುಖಂಡ ಚನ್ನಕೇಶವ ಅವರು ಏರ್ಪಡಿಸಿದ್ದ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಉಚಿತವಾಗಿ ೫೦ ಟನ್ ತರಕಾರಿ ವಿತರಿಸಿ ಮಾತನಾಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ನಿರ್ಗತಿಕರಿಗೆ ಲಾಕ್‌ಡೌನ್ ಪ್ರಾರಂಭದಿAದಲೂ ದಿನಸಿ, ತರಕಾರಿ, ಆಹಾರ ಪ್ಯಾಕೆಟ್‌ಗಳ ಜೊತೆಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಲಾಗುತ್ತಿದೆ.ಕ್ಷೇತ್ರದ ಎಲ್ಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಡವರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನ ತಲುಪಿಸಲು ನೇರವಾಗಿ ಕೋಲಾರ, ಚಿಕ್ಕಬಳ್ಳಾಪುರ, ಮಾಲೂರು ರೈತರಿಂದ ತರಕಾರಿ ಖರೀದಿಸಿ ವಿತರಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಸಾರ್ವಜನಿಕರು ಮನೆಯಿಂದ ಹೊರಬರದೇ ಮನೆಯಲ್ಲಿಯೆ ಇದ್ದು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ, ಕ್ಷೇತ್ರಾಧ್ಯಕ್ಷ ಶಿವುರಾಜ್, ಪಾಲಿಕೆ ಸದಸ್ಯರಾದ ಜಯಪ್ರಕಾಶ್, ಶ್ರೀಕಂತ್, ಮಾಜಿ ನಾಮನಿರ್ದೇಶತ ಸದಸ್ಯ ಅಂತೋಣಿಸ್ವಾಮಿ, ಶಿವಪ್ಪ ಮುಂತಾದವರು ಭಾಗವಹಿಸಿದ್ದರು.

ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆಆರ್‌ಪುರ(ಬೆಂ.ನಗರ)

Please follow and like us:

Related posts

Leave a Comment