ತುಮಕೂರಿನಲ್ಲಿ ಮತ್ತೀಬ್ಬರಿಗೆ ಕೊರೊನಾ, ಜನರಲ್ಲಿ ಆತಂಕ

ತುಮಕೂರು:ನಗರದ ಕೆಎಚ್‌ಬಿ ಕಾಲೋನಿಯ ನಿವಾಸಿ ೭೪ ವರ್ಷದ ವೃದ್ಧ ಪಿ-೫೩೫ಯಿಂದ ಕೊರೊನಾ ಸೊಂಕು ವ್ಯಾಪಿಸುತ್ತಲೇ ಇದೆ.
ನಿನ್ನೆ ವೃದ್ಧನ ಸಂಪರ್ಕದಲ್ಲಿ ಇದ್ದ ಪಿ-೫೫೩ ಪತ್ನಿಗೆ ಸೊಂಕು ದೃಡಪಟ್ಟಿತ್ತು.ಇಂದು ಪಿ-೫೩೫ ಹಾಗೂ ಪಿ-೫೫೩ ಜೊತೆ ಸಂಪರ್ಕದಲ್ಲಿದ್ದ ಪಕ್ಕದ ಮನೆಯ ಇಬ್ಬರು ದಂಪತಿಗಳಿಗೆ ಸೊಂಕು ಧೃಡಪಟ್ಟಿದೆ.
ಪತಿಗೆ ೪೦ ವರ್ಷ ಪಿ-೫೯೧,ಪತ್ನಿಗೆ ೨೯ ವರ್ಷ ಪಿ-೫೯೨ ಎಂದು ಗುರುತಿಸಲಾಗಿದೆ.ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ೭ಕ್ಕೇರಿದೆ. ಇನ್ನೂ ವೃದ್ದ ಹಾಗೂ ಆತನ ಪತ್ನಿಯ ಜೊತೆ ಸಂಪರ್ಕದಲ್ಲಿದ್ದವರನ್ನ ಐಸೋಲೇಟ್ ಮಾಡಲಾಗಿದೆ.
ಇದಲ್ಲದೆ,ವೃದ್ದನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದವರನ್ನ ಪತ್ತೆ ಹಚ್ಚಿ ಕ್ವಾರೈಂಟೈನ್‌ನಲ್ಲಿಟ್ಟಿದ್ದಾರೆ.ಮುAದಿನ ದಿನಗಳಲ್ಲಿ ಇನ್ನೆಷ್ಟು ಸೋಂಕು ವ್ಯಾಪಿಸುತ್ತದೆಯೋ ಎಂಬ ಅಂತಕ ನಾಗರಿಕರಲ್ಲಿ ಮನೆ ಮಾಡಿದೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment