ಆಳಂದ ತಾಲೂಕಿನ ಎಲ್ಲಮ ದೇವಿ ಜಾತ್ರೆ ರದ್ದು

ಆಳಂದ(ಕಲಬುರಗಿ):ಇದೇ ೧೧ರಿಂದ ೧೫ವರೆಗೆ ಜರುಗಬೇಕಿದ್ದ ಆಳಂದ ತಾಲೂಕಿನ ಹಡಲಗಿ ಗ್ರಾಮದ ಆರಾಧ್ಯ ದೇವತೆ ಎಲ್ಲಮ ದೇವಿ ಜಾತ್ರೆ ರದ್ದುಗೊಂಡಿದೆ ಎಂದು ದೇವಸ್ಥಾನದ ಕಮಿಟಿ ತಿಳಿಸಿದೆ.
ಈ ಕುರಿತು ದೇವಸ್ಥಾನದಲ್ಲಿ ಕರೆಯಲಾದ ಸಭೆಯಲ್ಲಿ ಜಾತ್ರೆ ರದ್ದು ಪಡಿಸಿರುವ ಬಗ್ಗೆ ಪ್ರಕಟಿಸಲಾಯಿತು.
ಇನ್ನು ಸಭೆಯಲ್ಲಿ ನಿಂಬರ್ಗಾ ಪಿಎಸ್‌ಐ ಸುರೇಶ್ ಕುಮಾರ ಗ್ರಾಮದ ಮುಖಂಡರೊAದಿಗೆ ಮಾತನಾಡಿ,ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಜಾತ್ರೆ ಮಾಡದಂತೆ ಸರ್ಕಾರ ಸೂಚನೆ ನೀಡಿದೆ ಎಂದರು.
ಈ ಜಾತ್ರೆಯಲ್ಲಿ ರಾಜ್ಯ ಸೇರಿ ಹೊರರಾಜ್ಯಗಳಿಂದ ಸುಮಾರು ಹತ್ತು ಸಾವಿರ ಜನರು ಸೇರುತ್ತಾರೆ. ಆದರೆ ಸರ್ಕಾರದ ಆದೇಶದಂತೆ ಜಾತ್ರೆ ರದ್ದು ಮಾಡಬೇಕು.ಗ್ರಾಮಸ್ಥರು ಮನೆಯಲ್ಲಿ ಇದ್ದು ಜಾತ್ರೆ ಆಚರಣೆ ಮಾಡಬೇಕು,ಒಂದು ವೇಳೆ ಜಾತ್ರೆಯ ನೆಪದಲ್ಲಿ ದೇವಸ್ಥಾನದ ಹತ್ತಿರ ಬರುವುದು,ಪೂಜೆ ಸಲ್ಲಿಸುವುದು ಮಾಡಿದರೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಪಿಡಿಓ ಯಲಗೊಂಡ ಹಿರೆಕುರಬರ ಮಾತಾನಾಡಿ,ಸರಕಾರ ನಮ್ಮ ಆರೋಗ್ಯಕ್ಕಾಗಿ ಜಾತ್ರೆ ಮಾಡದಂತೆ ತಿಳಿಸಿದೆ.ಹೀಗಾಗಿ ಸಾರ್ವಜನಿಕರು ಸಹಕಾರ ನೀಡಿ ಕಾನೂನು ಉಲ್ಲಂಘನೆ ಮಾಡಬೇಡಿ ಎಂದರು.

ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ(ಕಲಬುರಗಿ)

Please follow and like us:

Related posts

Leave a Comment