ಶಿರಾದಲ್ಲಿ ಉಚಿತ ಕೊಡೆ ವಿತರಣೆ..

ಶಿರಾ(ತುಮಕೂರು): ಶಿರಾ ತಾಲ್ಲೂಕಿನಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು, ಆರೋಗ್ಯ ಇಲಾಖೆಯ ಶುಶ್ರೂಷಕಿಯರು,ಆಶಾ ಕಾರ್ಯಕರ್ತೆಯರು ಬಿಸಿಲು ಮಳೆ ಎನ್ನದೆ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೀಗಾಗಿ ಇವರೆಲ್ಲರೂ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಉಪಯೋಗವಾಗಲೆಂದು ಶಿರಾ ಹಾಗೂ ಚಿ.ನಾ.ಹಳ್ಳಿ ಕ್ಷೇತ್ರದ ಜನ ಪ್ರತಿನಿಧಿಗಳು ಕೊಡೆಗಳನ್ನು ಹಂಚುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಶಿರಾ ತಾಲ್ಲೂಕು ಆಡಳಿತ,ಶಿರಾ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು,ಜಿ.ಪಂ ಸದಸ್ಯರು,ಪಕ್ಷದ ವಿವಿಧ ಮುಖಂಡರು ಉಪಸ್ಥಿತರಿದ್ದರು.
ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment