ಇಂಡಿ ತಾಲೂಕಿನಲ್ಲಿ 11 ಸಾವಿರ ಆಹಾರದ ಕಿಟ್ ವಿತರಣೆ..

ಇಂಡಿ(ವಿಜಯಪುರ): ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇ ತುತ್ತು ಊಟಕ್ಕೂ ಸಂಕಷ್ಟ ಎದುರಿಸುತ್ತಿರುವ ತಾಲೂಕಿನ ಬಡವರು,ನಿರ್ಗತಿಕರ ನೆರವಿಗೆ ಇದೀಗ ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ್ ಮುಂದಾಗಿದ್ದಾರೆ.
ಸದ್ಯ ಇಂಡಿ ತಾಲೂಕಿನಲ್ಲಿ ೧೧ ಸಾವಿರ ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿದ್ದು,ಇದರ ಬಗ್ಗೆ ಸುದ್ದಿಗಾರರಿಗೆ ಶಾಸಕ ಯಶವಂತರಾಯಗೌಡ ಪಾಟೀಲ್ ಮಾಹಿತಿ ನೀಡಿದ್ದಾರೆ.
ಅಂದ ಹಾಗೇ ಇಂಡಿ ನಗರ ಸೇರಿದಂತೆ ೮೮ ಪ್ರದೇಶಗಳ ೮೮ ಹಳ್ಳಿಗಳಲ್ಲಿರುವ ಬಡವರಿಗೆ,ನಿರ್ಗತಿಕರಿಗೆ ಆಹಾರದ ಕಿಟ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.ಜೊತೆಗೆ ಇಂಡಿ ಪಟ್ಟಣದ ಬಡವರಿಗೆ, ನಿರ್ಗತಿಕರಿಗೆ ಇಂದಿರಾ ಕ್ಯಾಂಟಿನ್‌ನಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಇನ್ನು ಲಾಕ್‌ಡೌನ್‌ನಿಂದಾಗಿ ಬೆಳೆದ ಬೆಳೆ ಮಾರಾಟ ಮಾಡಲಾಗದೇ ರೈತರು ಸಂಕಷ್ಟದಲ್ಲಿದ್ದು,ಜಮೀನಿನಲ್ಲಿ ಬೆಳೆದ ದ್ರಾಕ್ಷಿ, ಲಿಂಬೆ, ದಾಳಿಂಬೆ, ಕಲ್ಲಂಗಡಿ, ಬಾಳೆ,ಕರಬೂಜ್, ಈರುಳ್ಳಿ ಸೇರಿದಂತೆ ಸುಮಾರು ೫ ಸಾವಿರ ಕೋಟಿ ರೂಪಾಯಿ ಮೌಲ್ಯದ ಬೆಳೆ ಉತ್ಪಾದನೆ ಇತ್ತು.ಹೀಗಾಗಿ ಇದನ್ನು ಸರಕಾರಿ ಸ್ವಾಮ್ಯದ ಸಂಸ್ಥೆಯಿAದ ಖರೀದಿಸಿ ರೈತರ ಸಂಕಷ್ಟ ತಪ್ಪಿಸಬೇಕೆಂದು ಸಿಎಂಗೆ ಮನವಿ ಮಾಡಿದ್ದೇನೆ ಎಂದರು.

ಶAಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ(ವಿಜಯಪುರ)

Please follow and like us:

Related posts

Leave a Comment