ಮಾಧ್ಯಮಗಳ ಮೇಲೆ ಬೊಮ್ಮನಹಳ್ಳಿ ಎಸ್‌ಐ ದಬ್ಬಾಳಿಕೆ..

ಆನೇಕಲ್(ಬೆಂ.ನಗರ):ಬೆAಗಳೂರಿನ ಮೆಟ್ರೋ ಕಾರ್ಮಿಕರ ಮುಖದಲ್ಲಿ ಕೊನೆಗೂ ಸಂತಸ ಮೂಡಿದೆ.
ಸದ್ಯ ಈ ಎಲ್ಲಾ ಕಾರ್ಮಿಕರಿಗೆ ತಮ್ಮ ತಮ್ಮ ಊರುಗಳಿಗೆ ತೆರಳಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದ್ದು, ಟ್ರೈನ್ ಮೂಲಕ ಹೋಗುವುದಕ್ಕೆ ವ್ಯವಸ್ಥೆ ಮಾಡಿದೆ.
ಇನ್ನು ಊರುಗಳಿಗೆ ತೆರಳುವ ಕಾರ್ಮಿರ ಲಿಸ್ಟ್ ತಯಾರಿಸುತ್ತಿರುವ ಪೊಲೀಸರು ಬಳಿಕ ಅದನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.
ಸದ್ಯ ಜಾರ್ಖಂಡ್, ಬಿಹಾರ,ಉತ್ತರ ಪ್ರದೇಶ, ಹೀಗೆ ಒಂದೊAದು ರಾಜ್ಯಗಳ ಕಾರ್ಮಿಕರ ಮಾಹಿತಿ ಸಂಗ್ರಹ ಮಾಡುತ್ತಿರುವ ಪೊಲೀಸರು ಕ್ಯೂನಲ್ಲಿ ಆಯಾ ರಾಜ್ಯಗಳ ಕಾರ್ಮಿಕರನ್ನು ನಿಲ್ಲಿಸಿ ಹೆಸರು, ವಿಳಾಸ, ಆಧಾರ್ ಮತ್ತು ಜಿಲ್ಲೆಗಳ ಹೆಸರನ್ನು ಬರೆಸಿಕೊಳ್ಳುತ್ತಿದೆ.
ಇದೇ ವೇಳೆ ಪೊಲೀಸರಿಂದ ಲಿಸ್ಟ್ ರೆಡಿಯಾದ ಬಳಿಕ ಅದನ್ನು ಪರಿಶೀಲನೆ ನಡೆಸಿ ನಂತರ ರಾಜ್ಯ ಸರ್ಕಾರ ೮೦೦ಕ್ಕು ಹೆಚ್ಚು ಕಾರ್ಮಿಕರಿಗೆ ಟ್ರೈನ್ ವ್ಯವಸ್ಥೆ ಮಾಡಲಿದೆ ಎಂದು ಕೆಲ ಮೂಲಗಳು ತಿಳಿಸಿವೆ.
ಈ ನಡುವೆ ಬೊಮ್ಮನಹಳ್ಳಿಯಲ್ಲಿ ಇದೇ ಕಾರ್ಮಿಕರ ವರದಿಗಾಗಿ ಬಂದ ಮಾಧ್ಯಮದವರ ಮೇಲೆ ಬೊಮ್ಮನಹಳ್ಳಿ ಪಿಎಸ್‌ಐ ಶಿವಪ್ಪ..
ದರ್ಪ,ದಬ್ಬಾಳಿಕೆ ತೋರಿಸಿದ್ದಾರೆ.
ಕ್ಯಾಮಾರವನ್ನು ಕೈನಲ್ಲಿ ತಳ್ಳಿ ದರ್ಪ ಮೆರೆದ ಎಸ್‌ಐ ಶಿವಪ್ಪ.. ನೀವು ಯಾಕೆ ಇಲ್ಲಿಗೆ ಬಂದಿದ್ದೀರಿ..ನಿಮಗೆ ಯಾರು ಇಲ್ಲಿಗೆ ಬರೋದಕ್ಕೆ ಹೇಳಿದ್ರು..ನೀವು ಬರಿ ನೆಗೆಟೀವ್ ಮಾಡ್ತೀರಾ,ಜನರನ್ನು ಪ್ರವೋಕ್ ಮಾಡ್ತೀರಾ..ನಡೀರಿ ಗೇಟ್‌ನಿಂದ ನೀವು ಹೊರಕ್ಕೆ ಎಂದು ಮಾಧ್ಯಮದವರನ್ನು ತಳ್ಳಿದ್ದಾರೆ.
ಒಟ್ನಲ್ಲಿ ಎಸ್‌ಐ ಶಿವಪ್ಪನ ಅತಿರೇಕದ ವರ್ತನೆ ಸ್ವತಃ ಅಲ್ಲೇ ಇದ್ದ ಪೊಲೀಸರಿಗೂ ಸಹಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment