ಡಿಸಿ ನಿವಾಸದಲ್ಲಿ ಪೇದೆ ಆತ್ಮಹತ್ಯೆಗೆ ಕಾರಣನವೇನು?

ಬೆಳಗಾವಿ:ತಲೆಗೆ ಗುಂಡು ಹಾರಿಸಿಕೊಂಡು ಸೆಕ್ಯೂರಿಟಿ ಗಾರ್ಡ್ ವೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಇಲ್ಲಿನ ಡಿಸಿ ನಿವಾಸದ ಸೆಕ್ಯೂರಿಟಿ ಗಾರ್ಡ್ ವಾಸಿಸುತ್ರಿದ್ದ ಗಾರ್ಡ್ ನಿವಾಸದಲ್ಲಿ ಸೆಕ್ಯೂರಿಟಿ ತಲೆಗೆ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ವ್ಯಕ್ತಿ ಕಿತ್ತೂರು ನಿವಾಸಿ ಪ್ರಕಾಶ್ ಗುರವಣ್ಣನವರ್(೩೫)ಎಂದು ತಿಳಿದು ಬಂದಿದೆ.
ಇನ್ನು ಪ್ರಕರಣ ಸಂಬAಧ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್, ಡಿಸಿ ನಿವಾಸದ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಪ್ರಕಾಶ್ ಗುರವಣ್ಣನವರ್ ಎಸ್‌ಎಲ್‌ಆರ್ ಬಂದೂಕಿನಿAದ ಕತ್ತಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೇದೆ ಒಂದು ವಾರದಿಂದ ಡಿಸಿ ನಿವಾಸದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬೆಂಗಳೂರಿನಲ್ಲಿ ನೇಮಕಗೊಂಡಿದ್ದ ಪೇದೆ ಬೆಳಗಾವಿಗೆ ವರ್ಗಾವಣೆಗೊಂಡಿದ್ದರು. ಬೆಳಗಾವಿಯ ಪಿಡಬ್ಲ್ಯೂಡಿ ವಸತಿಗೃಹದಲ್ಲಿ ಕುಟುಂಬಸ್ಥರ ಜೊತೆ ವಾಸವಿದ್ದರು. ೨ ವರ್ಷಗಳಿಂದ ಮನೋವ್ಯಾಧಿಯಿಂದ ಬಳಲುತ್ತಿದ್ದರಂತೆ. ಮಧ್ಯದಲ್ಲಿ ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರೆಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ ಎಂದರು.
ಪೇದೆ ಸ್ಮಾರ್ಟ್ ಫೋನ್ ಗೀಳು ಹಚ್ಚಿಕೊಂಡಿದ್ದರು. ಯಾವಾಗಲೂ ಮೊಬೈಲ್ ನೋಡ್ತಿರ್ತೀಯಾ ಅಂತಾ ಕುಟುಂಬಸ್ಥರು ಸ್ಮಾರ್ಟ್ಫೋನ್ ಕಸಿದುಕೊಂಡು. ಎರಡು ದಿನಗಳ ಹಿಂದೆ ಬೇಸಿಕ್ ಮೊಬೈಲ್ ನೀಡಿದ್ದರು ಎನ್ನಲಾಗಿದೆ.
ಹೌಸ್ ರೆಸಿಡೆನ್ಷಿಯಲ್ ಗಾರ್ಡ್ ಕೆಲಸದಲ್ಲಿ ಒತ್ತಡ ಏನೂ ಇರಲ್ಲ. ಆತ್ಮಹತ್ಯೆಗೆ ಒತ್ತಡ ಕಾರಣ ಎಂದು ಹೇಳಲು ಬರುವುದಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸುತ್ತೇವೆ ಎಂದು ತಿಳಿಸಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಳಗಾವಿ

Please follow and like us:

Related posts

Leave a Comment