ತರಕಾರಿ ಬೆಳೆಗಾರು ಸಂಕಷ್ಟ ಆಲಿಸಿದ ಮಾಜಿ ಸಿಎಂ

ಆನೇಕಲ್(ಬೆಂ.ನಗರ): ಲಾಕ್ ಡೌನ್ ಎಫೆಕ್ಟ್ನಿಂದಾಗಿ ರೈತರಿಗೆ ಸಾಕಷ್ಟು ಬೆಳೆ ನಷ್ಟ ಹಿನ್ನೆಲೆಯಲ್ಲಿ ಆನೇಕಲ್ ಭಾಗದ ಹೂ, ಹಣ್ಣು, ತರಕಾರಿ ಬೆಳೆಗಾರು ಸಂಕಷ್ಟವನ್ನು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಆಲಿಸಿದ್ದಾರೆ.
ಅಂದ ಹಾಗೇ ಬೆಳಗ್ಗೆ ಚಂದಾಪುರದ ಎಎನ್‌ಆರ್ ಕಲ್ಯಾಣಮಂಟಪಕ್ಕೆ ಬಂದು ಫಲಾನುಭವಿಗಳಿಗೆ ಕಿಟ್ ನೀಡಿ, ದೊಡ್ಡಹಾಗಡೆ ಜರ್ಬೆರಾ, ಪಾಲಿಮರ್ ತೋಟಕ್ಕೆ ಭೇಟಿ ನೀಡಿದರು. ಕೆಂಪು ವಡೇರಹಳ್ಳಿ ಗುಲಾಬಿ ಪಾಲಿಮರ್ ತೋಟ ಹಾಗೂ ನೇರವಾಗಿ ಸರ್ಜಾಪುರದಲ್ಲಿ ಮತ್ತು ಮುಗುಳೂರಿನಲ್ಲಿ ಲಾಕ್‌ಡೌನ್ ಸಂತ್ರಸ್ಥರಿಗೆ ಆಹಾರ ದಿನಸಿ ವಿತರಿಸಿದರು. ಅದಕ್ಕೂ ಮುನ್ನ ತಿಂಡ್ಲು ಭಾಗದಲ್ಲಿ ಹೀರೇಕಾಯಿ-ಟೊಮೇಟೋ ಬೆಳೆಗಳನ್ನು ಪರಿಶೀಲಿಸಿ ರೈತರೊಂದಿಗೆ ಸಂಕಷ್ಟದ ವಿಚಾರ ವಿನಿಮಯ ಮಾಡಿಕೊಂಡರು.
ನAತರ ಮಾತನಾಡಿದ ಸಿದ್ದರಾಮಯ್ಯ, ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದಾರೆ.ಜರ್ಬೇರಾ ಹೂ ಬೆಳೆಗೆ ಸಾಕಷ್ಟು ಹಣ ಬೇಕಾಗುತ್ತದೆ. ಆದರೆ ಸರ್ಕಾರ ಇದೀಗ ಒಂದು ಹೆಕ್ಟೇರ್ ಹೂ ಬೆಳೆಗೆ ೨೫ ಸಾವಿರ ರೂ. ಕೊಡುವುದಾಗಿ ಹೇಳಿದೆ.ಒಂದು ಹೆಕ್ಟೇರ್ ಅಂದ್ರೆ ಅದು ಎರಡೂವರೆ ಎಕರೆಗೆ ಸಮ. ಸರ್ಕಾರದ ದೃಷ್ಟಿಯಲ್ಲಿ ಒಂದು ಎಕರೆಗೆ ಹತ್ತು ಸಾವಿರ ಬೀಳಲಿದೆ. ಇದ್ರಿಂದ ರೈತರಿಗೆ ಸಾಕಷ್ಟು ನಷ್ಟವಾಗಲಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಹೇಕು. ಒಂದು ಹೂವಿಗೆ ಹತ್ತು ರೂಪಾಯಿ ಬೀಳಲಿದೆ. ಹತ್ತು ಹೂವುಗಳಾದರೆ ಅದಕ್ಕೆ ನೂರು ರೂಪಾಯಿ ಬೀಳಲಿದೆ. ಇದೀಗ ಹೂ ಯಾರೂ ಕೊಳ್ಳುವವರಿಲ್ಲ. ಸರ್ಕಾರ ಹೂವಿನ ಬೆಳೆಗಾರರಿಗೆ ಮಾತ್ರ ನೆರವಿಗೆ ಬಂದಿದೆ. ಆದ್ರೆ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುವ ರೈತರ ನೆರವಿಗೂ ಬರಬೇಕು ಎಂದರು.
ಪಾಲಿಮರ್ ಹೌಸ್ ಹೊಸದಾಗಿ ಹಾಕಬೇಕಾದರೆ ಲಕ್ಷಾಂತರ ರೂ. ಖರ್ಚಾಗಲಿದೆ. ಪುಷ್ಪೋದ್ಯಮ, ಹೂವಿನ ಬೆಳೆಗಾರರಿಗೆ ಸರಿಯಾದ ಪರಿಹಾರ ನೀಡಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ನಾನು ಈ ಬಗ್ಗೆ ಪತ್ರ ಕೂಡ ಬರೆದಿದ್ದೇನೆ. ಸರ್ಕಾರ ನೀಡುತ್ತಿರುವ ಈ ಹಣಕ್ಕೆ ಒಂದು ಕೋಟಾ ಔಷಧಿ ಹೊಡೆಯೋದು ಕಷ್ಟ. ಅದ್ರಿಂದ ನಷ್ಟ ಎಷ್ಟಾಗಿದೆ ಅಂತ ಸರ್ವೆ ಮಾಡಬೇಕಿದೆ.ನಷ್ಟ ಆದವರಿಗೆ ೫೦ ಪರ್ಸೆಂಟ್ ಆದ್ರೂ ನೆರವು ನೀಡಬೇಕಿದೆ. ಇಲ್ಲದೆ ಹೋದರೆ ಇನ್ವೆಸ್ಟ್ ಮಾಡಿರೋರು ಸಾಲ ಕಟ್ಟೋದಕ್ಕೂ ಕಷ್ಟ. ಡಿ.ಕೆ ಸುರೇಶ್ ರೈತರ ತರಕಾರಿ ಕೊಳ್ಳಲು ಪ್ರಾರಂಭ ಮಾಡಿದ್ರು. ಎಲ್ಲಾ ರೈತರ ತರಕಾರಿ ಅವರೇ ಕೊಳ್ಳಲು ಆಗಲ್ಲ. ಹೀಗಾಗಿ ಬೇರೆಯವರು ಇದ್ರಿಂದ ಒಳ್ಳೆಯದನ್ನು ಮಾಡಿ ಅವರು ಕುಡಾ ರೈತರಿಗೆ ನೆರವು ಮಾಡಲಿ ಎಂಬುದು ಇದರ ಉದ್ದೇಶ.ಹಣ್ಣು, ತರಕಾರಿಯನ್ನು ಸರ್ಕಾರವೇ ನೇರವಾಗಿ ಕೊಂಡುಕೊಳ್ಳಬೇಕು. ಮಾರುಕಟ್ಟೆಗೆ ನೀಡಬೇಕು ಮತ್ತು ಸಾರಿಗೆ ವ್ಯವಸ್ಥೆ ಮಾಡಬೇಕು. ಇದನೆಲ್ಲಾ ಹೇಳಿದ್ದೇವೆ. ಆದರೆ ಅದನ್ನು ಯಾರೂ ಮಾಡ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಪ್ಯಾಕೇಜ್ ಬೇರೆಯವರಿಗೂ ವಿಸ್ತರಿಸಬೇಕಿದೆ. ಕೆಲವರಿಗೆ ಸೀಮಿತ ಮಾಡೋದು ಸರಿಯಲ್ಲ. ವ್ಯಾಪಾರ ಮಾಡುವವರಿಗೆ, ನೇಕಾರರಿಗೆ, ಕಾರ್ಮಿಕರು, ಕಮ್ಮಾರರು, ಚಮ್ಮಾರರು, ಬಡಗಿಗಳು ಹೀಗೆ ಇವರೆಲ್ಲರಿಗೂ ನೀಡಬೇಕು. ಅವರು ಲಿಸ್ಟ್ನಲ್ಲಿ ಇರುವವರಿಗೆ ಕೊಡಲಿ, ಸಂತೋಷ. ನಾವು ಹತ್ತು ಸಾವಿರ ಕೊಡುವುದಕ್ಕೆ ಹೇಳಿದ್ವಿ. ಅವರು ಐದು ಸಾವಿರ ಎಂದು ಹೇಳಿದ್ದಾರೆ. ಮಡಿವಾಳರಿಗೆ ಮತ್ತು ಕ್ಷೌರಿಕರಿಗೆ ಐದು ಸಾವಿರ ಅಂತ ಹೇಳಿದ್ದಾರೆ. ಸರ್ಕಾರ ರೈತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment